Asianet Suvarna News Asianet Suvarna News

ತಮ್ಮ ವಿರುದ್ಧ ಉಗ್ರಪ್ಪ-ಸಲೀಂ ಹಗರಣದ ಮಾತುಗಳಿಗೆ ಡಿಕೆಶಿ ಪ್ರತಿಕ್ರಿಯೆ

Oct 13, 2021, 4:45 PM IST

ಬೆಂಗಳೂರು, (ಅ.13): ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯ (Siddaramaiah)  ನಡುವೆ ಕಾಂಗ್ರೆಸ್‌ ನಾಯಕರ ಕಿಚ್ಚು ಹಚ್ಚುವ ಮಾತು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಡಿಕೆಶಿ ಕುರಿತ ಮಾತು ವೈರಲ್: ಸ್ಪಷ್ಟನೆ ಕೊಟ್ಟ ವಿ.ಎಸ್. ಉಗ್ರಪ್ಪ

 ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ (Salim) ಹಾಗೂ ಮಾಜಿ ಸಂಸದ ಉಗ್ರಪ್ಪ (V S Ugrappa) ನಡುವೆ ನಡೆದ ಸಂಭಾಷಣೆಯಲ್ಲಿ ಡಿ.ಕೆ.ಶಿವಕುಮಾರ್​, 'ಕಲೆಕ್ಷನ್ ಗಿರಾಕಿ' ಎಂದು ಸಲೀಂ ಹೇಳಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಘಟನೆ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.