Asianet Suvarna News Asianet Suvarna News

ಡಿಕೆಶಿ ಕುರಿತ ಮಾತು ವೈರಲ್: ಸ್ಪಷ್ಟನೆ ಕೊಟ್ಟ ವಿ.ಎಸ್. ಉಗ್ರಪ್ಪ

Oct 13, 2021, 3:52 PM IST

ಬೆಂಗಳೂರು, (ಅ.13): ಕೆಪಿಸಿಸಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಚರ್ಚೆಯೊಂದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಮಾಜಿ ಸಂಸದ ಉಗ್ರಪ್ಪ ನಡುವೆ ನಡೆದ ಸಂಭಾಷಣೆ ಇದಾಗಿದೆ. ಈ ಸಂಭಾಷಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, 'ಕಲೆಕ್ಷನ್ ಗಿರಾಕಿ' ಎಂದು ಸಲೀಂ ಅವರು ಹೇಳಿದ್ದಾರೆ. ಇವರಿಬ್ಬರ ನಡುವಿನ ಸಂಭಾಷಣೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಕುಡಿಯುವ ಬಗ್ಗೆಯೂ ಚರ್ಚೆಯಾಗಿದೆ.

ಡಿಕೆಶಿ ವಿರುದ್ಧದ ಹೇಳಿಕೆ : ಕಾಂಗ್ರೆಸ್ ಮುಖಂಡ ಪಕ್ಷದಿಂದ ಸಸ್ಪೆಂಡ್

ಇನ್ನು ಈ ಬಗ್ಗೆ ವಿ.ಎಸ್ ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿದ್ದು, ಸಲೀಂ ಹಾಗೂ ತಮ್ಮ ನಡುವೆ ನಡೆದ ಚರ್ಚೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.