ಡಿಕೆ ಪುತ್ರಿ ಗಟ್ಟಿತನದಲ್ಲಿ ಅಪ್ಪನ ಪಡಿಯಚ್ಚು! ಬಂಡೆಯಂಥಾ ಅಪ್ಪನಿಗೆ ಬೋಲ್ಡ್ & ಖಡಕ್ ಮಗಳು!
ಡಿಕೆ ಶಿವಕುಮಾರ್ ಅವರ ಮಗಳಿಗೆ ಗಟ್ಟಿತನ ಅನ್ನೋದು ರಕ್ತದಲ್ಲೇ ಬಂದಿದೆ. ಮಗಳನ್ನು ಮಗನಿಗಿಂತ ಹೆಚ್ಚು ಎನ್ನುವಂತೆ ಬೆಳೆಸಿದ್ದಾರೆ ಡಿಕೆಶಿ. ಕನಕಪುರದ ಗಟ್ಟಿಗನ ಗಟ್ಟಿಗಿತ್ತಿ ಮಗಳು ಛಲಗಾತಿಯಾಗಿದ್ದು ಹೇಗೆ ಅನ್ನೋ ಇಂಟ್ರೆಸ್ಟಿಂಗ್ ಕಥೆ
ಬೆಂಗಳೂರು: ಅಪ್ಪನಂತೆ ಮಗಳು. ತಂದೆಗೆ ತಕ್ಕ ಮಗಳು. ಈಕೆ ಕನಕಪುರದ ಗಟ್ಟಿಗನ ಗಟ್ಟಿಗಿತ್ತಿ ಮಗಳು. ಉಸಿರು ಚೆಲ್ಲಿದ ಎಸ್.ಎಂ ಕೃಷ್ಣ ಅವರ ಪಾರ್ಥಿವದ ಪಕ್ಕ ನಿಂತಿದ್ದಳು ಆ ಹೆಣ್ಣು ಮಗಳು! ಭದ್ರತೆಗೆ ಅಂತ ಬಂದ ಪೊಲೀಸರ ಜೊತೆ ಡಿಸ್ಕಷನ್ನು, ಡೈರೆಕ್ಷನ್ನು, ಸೂಪರ್'ವಿಷನ್ನು ಎಲ್ಲವೂ ಆಕೆಯದ್ದೇ.
ಅವಳು ಕನಕಪುರ ಬಂಡೆಯ ಮುದ್ದಿನ ಮಗಳು, ಛಲಗಾರನ ಛಲಗಾತಿ ಪುತ್ರಿ. ಎಸ್ಎಂ ಕೃಷ್ಣ ಅವರ ಮನೆಗೆ ಸೊಸೆಯಾಗಿ ಬಂದವಳು ಆ ಕುಟುಂಬಕ್ಕೆ ಮನೆಮಗಳಾದ ಕಥೆಯೇ ಇವತ್ತಿನ ಸುವರ್ಣ ಸ್ಪೆಷಲ್, ಗಟ್ಟಿಗನ ಗಟ್ಟಿಗಿತ್ತಿ ಮಗಳು.