ಬಿಜೆಪಿ- ಕಾಂಗ್ರೆಸ್‌ ಮಧ್ಯೆ ಧರ್ಮ ದಂಗಲ್‌: ಹಳೇ ವಿವಾದಗಳಿಗೆ ಹೊಸ ಸರ್ಕಾರದಿಂದ ಮರುಜೀವ

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಧರ್ಮ ದಂಗಲ್‌ ಶುರುವಾಗುತ್ತಿದ್ದು, ಹಳೇ ವಿವಾದಗಳಿಗೆ ಈ ಹೊಸ ಸರ್ಕಾರದಿಂದ ಮರುಜೀವ ಸಿಕ್ಕಂತಾಗುತ್ತಿದೆ. 

Share this Video
  • FB
  • Linkdin
  • Whatsapp

ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ದಂಗಲ್‌ ಶುರುವಾಗಿದೆ. ಬಿಜೆಪಿ ಸರ್ಕಾರದ ಹಳೇ ವಿವಾದಗಳು ಮತ್ತೆ ರೀ ಓಪನ್‌ ಆಗುತ್ತಿವೆ. ಈಗಿನ ಹೊಸ ಸರ್ಕಾರ ಹಳೇ ವಿವಾದಗಳಿಗೆ ಮತ್ತೆ ಮರುಜೀವ ಕೊಡುತ್ತಿದೆ. ಖಾಕಿ ಕೇಸರಿಕರಣ, ಹಿಜಾಬ್‌, ಪಠ್ಯ ಪುಸ್ತಕ ಪರಿಷ್ಕರಣೆ ಎಲ್ಲಾ ವಿವಾದಗಳು ಮತ್ತೆ ಶುರುವಾಗುವಂತೆ ಕಾಣುತ್ತಿದೆ. ಈ ಮೂಲಕ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಧರ್ಮ ದಂಗಲ್‌ ಶುರುವಾಗುತ್ತಿದೆ. ಹತ್ತನೇ ತರಗತಿ ಪಠ್ಯದಲ್ಲಿ ಇರುವ ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡ್ಗೆವಾರ್‌ ಭಾಷಣಕ್ಕೆ ಬ್ರೇಕ್‌ ಹಾಕುವಂತೆ ಒತ್ತಾಯ ಕೇಳಿಬರುತ್ತಿದೆ. ಬಿಜೆಪಿ ಸರ್ಕಾರದ ಎಲ್ಲಾ ಬಿಲ್‌ಗಳನ್ನು ಪರಿಷ್ಕರಣೆ ಮಾಡುತ್ತೇವೆ. ಹಿಜಾಬ್‌ ಬಗ್ಗೆ ಮತ್ತೆ ಪರಿಶೀಲನೆ ಮಾಡುತ್ತೇವೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ಕಾಂಗ್ರೆಸ್ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುತ್ತಿದೆ: ಬಸವರಾಜ ಬೊಮ್ಮಾಯಿ‌

Related Video