Asianet Suvarna News Asianet Suvarna News

ದಳಪತಿಗಳ ಮೈತ್ರಿ ಮಾತು: ಬಿಜೆಪಿ ಬಳಿ ಯಾವೆಲ್ಲ ಬೇಡಿಕೆ ಇಡಲಿದೆ ಜೆಡಿಎಸ್‌..?

ದೇವೇಗೌಡರು, ಕುಮಾರಸ್ವಾಮಿ ಮಾತಿಗೆ ಸರ್ವಾನುಮತದ ಸಮ್ಮತಿ
ಅವರಿಬ್ಬರು ಏನು ಹೇಳ್ತಾರೋ ಅದನ್ನ ಒಪ್ಪಿಕೊಳ್ತೀವಿ ಎಂದ ರೇವಣ್ಣ
ಹಾಸನ, ಮಂಡ್ಯ, ತುಮಕೂರು ಪಡೆಯಲು ಜೆಡಿಎಸ್ ಸಿದ್ಧತೆ

ಜೆಡಿಎಸ್-ಬಿಜೆಪಿ ಮೈತ್ರಿಯ ಅಂತಿಮ ಹಂತದ ಕಸರತ್ತು ನಡೆಯುತ್ತಿದೆ. ಗುರುವಾರ ತಡರಾತ್ರಿವರೆಗೂ ದಳಪತಿಗಳ ಹೈ ವೋಲ್ಟೇಜ್ ಮೀಟಿಂಗ್ ನಡೆದಿದೆ. ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ, ಕುಮಾರಸ್ವಾಮಿ ನೇತೃತ್ವದಲ್ಲಿ ಮ್ಯಾರಥಾನ್ ಮೀಟಿಂಗ್ ನಡೆಸಲಾಗಿದೆ. ಬಿಜೆಪಿ(BJP) ಭೇಟಿಗೂ ಮುನ್ನ ಜೆಡಿಎಸ್(JDS) ನಾಯಕರು ಸಭೆ ನಡೆಸಿದ್ದು, ಮೈತ್ರಿ ಸಂಬಂಧ ದೇವೇಗೌಡರ(Devegowda) ದೆಹಲಿ ನಿವಾಸದಲ್ಲಿ ಮಾತುಕತೆ ನಡೆಸಲಾಗಿದೆ. ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ, ಹೆಚ್‌.ಡಿ. ರೇವಣ್ಣ, ಪ್ರಜ್ವಲ್, ನಿಖಿಲ್, ಸಾರಾ ಮಹೇಶ್ ಈ ಸಭೆಯಲ್ಲಿ ಭಾಗಿಯಾಗಿದ್ದರು. ಬಿಜೆಪಿ ಬಳಿ ಯಾವೆಲ್ಲ ಬೇಡಿಕೆ ಇಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗ್ತಿದೆ. ಯಾವೆಲ್ಲಾ ಕ್ಷೇತ್ರಗಳನ್ನು ಪಡೆಯಬೇಕು ಎಂದು ಮಾತುಕತೆ ನಡೆಸಿದ್ದು, ದೇವೇಗೌಡರು, ಕುಮಾರಸ್ವಾಮಿ ಮಾತಿಗೆ ಸರ್ವಾನುಮತದ ಸಮ್ಮತಿ ಸಿಕ್ಕಿದೆ ಎನ್ನಲಾಗ್ತಿದೆ. ಅವರಿಬ್ಬರು ಏನು ಹೇಳ್ತಾರೋ ಅದನ್ನ ಒಪ್ಪಿಕೊಳ್ತೀವಿ ಎಂದು ರೇವಣ್ಣ ಹೇಳಿದ್ದಾರಂತೆ. ಇಂದು ಜೆಡಿಎಸ್ ನಾಯಕರಿಂದ ಅಮಿತ್ ಶಾ(Amit Shah) ಭೇಟಿ ಮಾಡುವ ಸಾಧ್ಯತೆ ಇದೆ. ನಿನ್ನೆ ನಡೆಯುಬೇಕಿದ್ದ ಸಭೆ, ಮೀಸಲಾತಿ ಮಂಡನೆ ಹಿನ್ನೆಲೆ ಮುಂದೂಡಿಕೆಯಾಗಿದೆ. ಅಷ್ಟೇ ಅಲ್ಲದೇ ದೇವೇಗೌಡರನ್ನು ಗೋವಾ ಸಿಎಂ ಪ್ರಮೋದ್ ಸಾವಂತ್ ಭೇಟಿಯಾಗಿದ್ದಾರೆ. ಅಮಿತ್ ಶಾ ಭೇಟಿಗೂ ಮುನ್ನ ಸ್ಥಾನಗಳ ಸಂಖ್ಯೆ ಖಚಿತ ಪಡಿಸಿ ಎಂದು ಸಾವಂತ್ ಹೇಳಿದ್ದಾರಂತೆ. ಹಾಸನ, ಮಂಡ್ಯ, ತುಮಕೂರು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗ್ತಿದೆ.

ಇದನ್ನೂ ವೀಕ್ಷಿಸಿ:  ಡಿಎಂಕೆ ಮುಖಂಡ ಗುರುಸ್ವಾಮಿ ಮೂರ್ತಿ ಮೇಲೆ ಹಲ್ಲೆ: ಅಟ್ಯಾಕ್‌ನ ಭೀಕರ ದೃಶ್ಯ ಇಲ್ಲಿದೆ..