
ಡಿಎಂಕೆ ಮುಖಂಡ ಗುರುಸ್ವಾಮಿ ಮೂರ್ತಿ ಮೇಲೆ ಹಲ್ಲೆ: ಅಟ್ಯಾಕ್‌ನ ಭೀಕರ ದೃಶ್ಯ ಇಲ್ಲಿದೆ..
ತಮಿಳುನಾಡಿನ ಡಿಎಂಕೆ ಮುಖಂಡ ಗುರುಸ್ವಾಮಿ ಮೇಲೆ ಸೆ.4ರಂದು ಹಲ್ಲೆ ಮಾಡಲಾಗಿತ್ತು. ಇದರ ವಿಡಿಯೋ ಇದೀಗ ಲಭ್ಯವಾಗಿದೆ.
ಡಿಎಂಕೆ ಮುಖಂಡ ಎಂಕೆ ಅಳಗಿರಿ ಆಪ್ತ, ತಮಿಳುನಾಡಿನ ನಟೋರಿಯಸ್ ರೌಡಿ ಮೇಲೆ ಬೆಂಗಳೂರಲ್ಲಿ(Bengaluru) ಡೆಡ್ಲಿ ಅಟ್ಯಾಕ್ ಮಾಡಲಾಗಿದೆ. ಮಧುರೈನ ನಟೋರಿಯಸ್ ರೌಡಿಯಾಗಿರೊ ವಿಕೆ ಗುರುಸ್ವಾಮಿ ಮೂರ್ತಿ(VK Guruswamy Murthy) ಮೇಲೆ ಅಟ್ಯಾಕ್ ನಡೆಸಲಾಗಿದ್ದು, ಲಿಟಿಗೇಷನ್ ಇರೋ ಸೈಟ್ ವಿಚಾರವಾಗಿ ಬೆಂಗಳೂರಿಗೆ ಮಾತುಕತೆಗೆ ಬಂದಿದ್ದರು. ಫ್ಲೈಟ್‌ನಲ್ಲಿ ಬಂದು ಹೋಟೆಲ್ ನಲ್ಲಿ ಗುರುಸ್ವಾಮಿ ರೂಂ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಮನೆಯೊಂದನ್ನು ಹುಡುಕಿ ಸಂಜೆ ಸೈಟ್ ಬಗ್ಗೆ ಮಾತುಕತೆ ಮಾಡಲು ಹೋಟೆಲ್‌ಗೆ ಹೋಗಿದ್ದರು. ಬ್ರೋಕರ್ ಜೊತೆ ಗುರುಸ್ವಾಮಿ ಮಾತುಕತೆ ಮಾಡ್ತಾ ಇದ್ದರು. ಈ ವೇಳೆ ತಮಿಳುನಾಡು ರಿಜಿಸ್ಟ್ರೇಷನ್ ಕಾರಿನಲ್ಲಿ ಬಂದ ನಾಲ್ಕೈದು ಜನರು ಏಕಾಏಕಿ ಅಟ್ಯಾಕ್(Attack) ಮಾಡಿದ್ದು, ಇದೀಗ ಇದರ ವಿಡಿಯೋ ಲಭ್ಯವಾಗಿದೆ. ಸೆ.4 ರಂದು ಈ ಘಟನೆ ನಡೆದಿದೆ. ಸದ್ಯ ಅವರ ತಲೆಗೆ ಗಂಭೀರಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ತಮಿಳುನಾಡು ರೌಡಿ ಶೀಟರ್ ಮೇಲೆ ಅಟ್ಯಾಕ್: ಊರು ಬಿಟ್ಟರೂ ಎದುರಾಳಿಗಳು ಬಿಡಲಿಲ್ಲ..!