Asianet Suvarna News Asianet Suvarna News

ಸಿಎಂ ವಿವಾದ: ಸಿದ್ದು ಪರ ಮತ್ತಷ್ಟು ಶಾಸಕರ ಬೆಂಬಲ; ಡಿಕೆಶಿ ಗರಂ

Jun 24, 2021, 3:35 PM IST

ಬೆಂಗಳೂರು (ಜೂ. 24): ಹೈಕಮಾಂಡ್‌ ತಾಕೀತು ಮಾಡಿದ ಹೊರತಾಗಿಯೂ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಬೇಕು ಎಂಬ ಶಾಸಕರ ಹೇಳಿಕೆ ಸರಣಿ ಕಾಂಗ್ರೆಸ್‌ನಲ್ಲಿ ಮುಂದುವರೆದಿದೆ.  ‘ನಾನೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಶಾಸಕರು ಹೇಳಿದರೆ ಅದಕ್ಕೆ ನಾನೇನೂ ಮಾಡಲಾಗುವುದಿಲ್ಲ. ಶಾಸಕರ ಹೇಳಿಕೆಗೂ ನನಗೂ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. 

ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆ ಟಾಕ್ ವಾರ್, ಉಲ್ಟಾ ಹೊಡೆಯಿತಾ ಡಿಕೆಶಿ ಲೆಕ್ಕಾಚಾರ..?

ಇನ್ನೊಂದು ಕಡೆ‘ಪದೇಪದೇ ಮುಂದಿನ ಮುಖ್ಯಮಂತ್ರಿ ವಿಚಾರ ಪ್ರಸ್ತಾಪಿಸುತ್ತಿರುವ ಕಾಂಗ್ರೆಸ್‌ ಶಾಸಕರನ್ನು ಶಾಸಕಾಂಗ ಪಕ್ಷದ ನಾಯಕರು ನಿಯಂತ್ರಿಸುತ್ತಾರೆ. ಇಲ್ಲದಿದ್ದರೆ, ಈ ವಿಚಾರ ನೋಡಿಕೊಳ್ಳಲು ಕಾಂಗ್ರೆಸ್‌ ಜೀವಂತವಿದೆ’ ಎಂಬರ್ಥ ಬರುವ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಡಿಕೆಶಿ- ಸಿದ್ದು ನಡುವಿನ ಗುದ್ದಾಟಕ್ಕೆ ಕಾರಣವೇನು..? 

 

Video Top Stories