ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆ ಟಾಕ್ ವಾರ್‌, ಉಲ್ಟಾ ಹೊಡೆಯಿತಾ ಡಿಕೆಶಿ ಲೆಕ್ಕಾಚಾರ..?

ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆ ಟಾಕ್ ವಾರ್‌ ಬಹಳ ಜೋರಾಗಿದೆ. ಸಿದ್ದರಾಮಯ್ಯ ಹೆಸರು ಬಹಳ ಕೇಳಿ ಬರುತ್ತಿದೆ. ಇದರ ಹಿಂದಿನ ಅಸಲಿ ಕಾರಣವೇನು.? ಎಂದು ನೋಡುವುದಾದರೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಡೆಯೇ ಕಾರಣ ಎನ್ನಲಾಗುತ್ತಿದೆ. 

First Published Jun 24, 2021, 11:54 AM IST | Last Updated Jun 24, 2021, 3:20 PM IST

ಬೆಂಗಳೂರು (ಜೂ. 24): ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆ ಟಾಕ್ ವಾರ್‌ ಬಹಳ ಜೋರಾಗಿದೆ. ಸಿದ್ದರಾಮಯ್ಯ ಹೆಸರು ಬಹಳ ಕೇಳಿ ಬರುತ್ತಿದೆ. ಇದರ ಹಿಂದಿನ ಅಸಲಿ ಕಾರಣವೇನು.? ಎಂದು ನೋಡುವುದಾದರೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಡೆಯೇ ಕಾರಣ ಎನ್ನಲಾಗುತ್ತಿದೆ.

ಆಪ್ತರ ಹೇಳಿಕೆಗೆ ಬ್ರೇಕ್ ಹಾಕುವಂತೆ ಸಿದ್ದುಗೆ ಡಿಕೆಶಿ ಪರೋಕ್ಷ ಸೂಚನೆ

ಪ್ರತಿ ಕ್ಷೇತ್ರದಲ್ಲೂ ಸರ್ವೇ ಮಾಡಿ ಟಿಕೆಟ್ ಫೈನಲ್ ಎನ್ನುತ್ತಿದ್ದಾರೆ. ಇದು ಶಾಸಕರನ್ನು ಅಸಮಾಧಾನ ಉಂಟು ಮಾಡಿದೆ. ಜೊತೆಗೆ ಜಮೀರ್ ಹಾಗೂ ಎಚ್‌ಡಿಕೆ ನಡುವಿನ ಫೈಟ್‌ಗೆ ಡಿಕೆಶಿ ಎಂಟ್ರಿ ಕೊಟ್ಟಿದ್ದಕ್ಕೂ ಅಸಮಾಧಾನಗೊಂಡಿರುವ ಜಮೀರ್, ಸಿದ್ದರಾಮಯ್ಯ ಹೆಸರನ್ನು ಸಿಎಂ ಹುದ್ದೆಗೆ ಪ್ರಸ್ತಾಪಿಸಿದ್ಧಾರೆ. ಜಮೀರ್ ಹೇಳಿಕೆ ಬಹುತೇಕ ಶಾಸಕರೂ ಬೆಂಬಲ ವ್ಯಕ್ತಪಡಿಸಿದ್ದಾರೆ. 

Video Top Stories