Asianet Suvarna News Asianet Suvarna News

2028ರ ಕುರುಕ್ಷೇತ್ರಕ್ಕೂ ರೆಡಿಯಾಗ್ತಿದೆ ಡಿಸಿಎಂ ಬ್ಲೂ ಪ್ರಿಂಟ್: ತೊಡೆ ತಟ್ಟಿದವರೇ ಟಾರ್ಗೆಟ್.. ಏನಿದು ಡಿಕೆ ಬೇಟೆ ಸೀಕ್ರೆಟ್..?

ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ ಕೈ ಸಾರಥಿ..!
ಸವಾಲ್ ಹಾಕಿದವರನ್ನೇ ಟಾರ್ಗೆಟ್ ಮಾಡಿದ್ದಾರೆ ಕನಕಪುರ ಬಂಡೆ..!
ರಾಜ್ಯ ಗೆದ್ದ ಕನಕಪುರದ ಛಲಗಾರನ ಮುಂದಿನ ಗುರಿ ರಾಜಧಾನಿ..!

First Published Jun 17, 2023, 10:48 AM IST | Last Updated Jun 17, 2023, 10:48 AM IST

ರಾಜ್ಯ ರಾಜಕಾರಣದ ರಣಬೇಟೆಗಾರನ ಕಣ್ಣು ರಾಜಧಾನಿ ರಾಜಕೀಯದ ಮೇಲೆ. 24ರ ಮಹಾಭಾರತ, 28ರ ಕುರುಕ್ಷೇತ್ರ... ಡಬಲ್ ಬೇಟೆಗೆ ಗುರಿ ಇಟ್ಟು ಅಖಾಡಕ್ಕಿಳಿದಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್. ರಣರಂಗದ ಚದುರಂಗದಲ್ಲಿ ಸವಾಲ್ ಹಾಕಿದರನ್ನು ಮಟ್ಟ ಹಾಕುವ ಶಪಥ ಮಾಡಿದ್ದಾರೆ ಕನಕಪುರ ಬಂಡೆ. ಡಿಕೆಶಿ ಬೆಂಗಳೂರು ಉಸ್ತುವಾರಿ ಆಗಿದ್ದರ ಹಿಂದಿರೆ ರೋಚಕ ರಾಜಕೀಯದಾಟ. ಬೇಟೆಗಾರನ ಬೆಂಗಳೂರು ವ್ಯೂಹದಲ್ಲಿ ತೊಡೆ ತಟ್ಟಿದವರನ್ನು ಮಟ್ಟ ಹಾಕುವ ರಣವ್ಯೂಹ ರಹಸ್ಯವೂ ಅಡಗಿದೆ. ಅಷ್ಟಕ್ಕೂ ರಾಜಧಾನಿಯಲ್ಲಿ ಡಿಕೆ ಟಾರ್ಗೆಟ್ ಮಾಡಿರೋದು ಯಾರ್ಯಾರನ್ನ..? ರಾಜಧಾನಿ ರಾಜಕಾರಣದಲ್ಲಿ ನಿಗೂಢ ಹೆಜ್ಜೆ ಇಡ್ತಿರೋ ಡಿಸಿಎಂ ಡಿಕೆ ಶಿವಕುಮಾರ್ ಟಾರ್ಗೆಟ್ ಲೋಕಸಭಾ ಚುನಾವಣೆ.ಬೆಂಗಳೂರಿನಲ್ಲಿ ಭದ್ರನೆಲೆ ಸ್ಥಾಪಿಸಿರುವ ಬಿಜೆಪಿ ಶಾಸಕರ ಸೋಲಿಗೆ ಟಾರ್ಗೆಟ್ ಫಿಕ್ಸ್ ಮಾಡಿದ್ದಾರಂತೆ ಡಿಸಿಎಂ ಡಿಕೆ ಶಿವಕುಮಾರ್. ಕರ್ನಾಟಕ ಕುರುಕ್ಷೇತ್ರದಲ್ಲಿ ಕಾಂಗ್ರೆಸ್‌ನನ್ನು ಗೆಲ್ಲಿಸಿದ ಡಿಕೆ ಶಿವಕುಮಾರ್ ಅವರ Next ಟಾರ್ಗೆಟ್ ಲೋಕಸಭಾ ಚುನಾವಣೆ. ಅದ್ರಲ್ಲೂ ಬೆಂಗಳೂರನ್ನೇ ಟಾರ್ಗೆಟ್ ಮಾಡ್ಕೊಂಡು ಡಿಕೆಶಿಯವ್ರ ಯುದ್ಧತಾಲೀಮು ಆಗ್ಲೇ ಶುರುವಾಗಿ ಬಿಟ್ಟಿದೆ.

ಇದನ್ನೂ ವೀಕ್ಷಿಸಿ: Today Horoscope: ಈ ದಿನ ಒಳ್ಳೆಯ ಕಾರ್ಯಕ್ಕೆ ಉತ್ತಮವಲ್ಲ..ಶನಿದೇವರ ಪ್ರಾರ್ಥನೆ ಮಾಡಿ

Video Top Stories