Asianet Suvarna News Asianet Suvarna News

ಮುಂಗಾರಿಗೂ ಮುನ್ನ ಡಿಸಿಎಮ್ ನಗರ ಪ್ರದಕ್ಷಿಣೆ, ರಾಜಧಾನಿ ಗಂಡಾಂತರ ತಪ್ಪಿಸೋಕೆ ಈಗಲೇ ಅಖಾಡಕ್ಕೆ...!

 ಮುಂಗಾರು ಮಳೆ ಬಂತು ಅಂದ್ರೆ ಸಾಕು ರೈತರು ಸಂಭ್ರಮ ಪಡ್ತಾರೆ.. ಆದ್ರೆ ಬೆಂಗಳೂರಿನ ಕೆಲವೆಡೆ ಆ ಮಳೆ ಅಷ್ಟು ಕಷ್ಟ ತಂದುಕೊಡುತ್ತೆ.. ಬೆಂಗಳೂರಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾದ್ರೆ ಸಾಕು, ಮಿನಿ ಪ್ರವಾಹವೇ ಸಂಭವಿಸುತ್ತೆ.
 

First Published Jun 9, 2023, 1:46 PM IST | Last Updated Jun 9, 2023, 1:46 PM IST

ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು ಹತ್ತಿರತ್ತಿರ 25 ದಿನ ಆಗ್ತಾ ಬಂದಿದೆ.. ಅಷ್ಟ್ರಲ್ಲೇ ಕೊಟ್ಟ ಗ್ಯಾರಂಟಿ ಭರವಸೆಗಳನ್ನೆಲ್ಲಾ ಈಡೇರಿಸೋಕೆ ಕಂಕಣಬದ್ಧವಾಗಿದೆ.. ಸಿಎಂ ಸಿದ್ದರಾಮಯ್ಯನೋರ ಮಾತಿನ ಹಾಗೆ, ಮುಂದಿನ ಆಗಸ್ಟ್ ವೇಳೆಗೆ 5 ಗ್ಯಾರಂಟಿಗಳೂ ಜನರನ್ನ ತಲುಪೋದು ಬಹುತೇಕ ಫಿಕ್ಸ್. ಅದರ ನಡುವೆ, ಉಪಮುಖ್ಯಮಂತ್ರಿಗಳೂ ಸಹ ಈಗ ಹೈಪರ್ ಆ್ಯಕ್ಟೀವ್ ಆಗಿದಾರೆ.. ರಾಜ್ಯ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ, ಸಧ್ಯಕ್ಕಿರೋ ಸಮಸ್ಯೆಗಳಿಗೆ, ಸವಾಲುಗಳಿಗೆ ಅಂತಿಮ ಪರಿಹಾರ ಹುಡುಕೋಕೆ ನಗರ ಪ್ರದಕ್ಷಿಣೆ ನಡೆಸಿದ್ದಾರೆ. ಮುಂಗಾರು ಮಳೆ ಬಂತು ಅಂದ್ರೆ ಸಾಕು ರೈತರು ಸಂಭ್ರಮ ಪಡ್ತಾರೆ.. ಆದ್ರೆ ಬೆಂಗಳೂರಿನ ಕೆಲವೆಡೆ ಆ ಮಳೆ ಅಷ್ಟುಕಷ್ಟ ತಂದುಕೊಡುತ್ತೆ.. ಬೆಂಗಳೂರಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾದ್ರೆ ಸಾಕು, ಮಿನಿ ಪ್ರವಾಹವೇ ಸಂಭವಿಸುತ್ತೆ. ಆದ್ರೆ, ಇನ್ಮುಂದೆ ಈ ಥರದ್ದೇನು ಆಗ್ಲೇಬಾರದು ಅನ್ನೋ ಕಾರಣಕ್ಕೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ.. ಅಪಾಯದ ಮೂಲ ಎಲ್ಲಿದೆಯೋ, ಅದನ್ನೇ ಬುಡಸಹಿತ ಕಿತ್ತು ಹಾಕೋಕೆ ಸನ್ನದ್ಧರಾಗಿದ್ದಾರೆ..