ನೀರಿನಲ್ಲಿ ಕೊಚ್ಚಿಹೋಗಿದ್ದ ಶರತ್ ಮೃತದೇಹ ಪತ್ತೆ: ಜಲಸಮಾಧಿಯಾದ ಮಗ..ಪೋಷಕರ ಆಕ್ರಂದನ

ರಾಜ್ಯದಲ್ಲಿ ಮಳೆ ನಿಂತರೂ ಮುಂದುವರೆದ ಅವಾಂತರ
ನೀರಿನಲ್ಲಿ ಕೊಚ್ಚಿಹೋಗಿದ್ದ ಶರತ್ ಶವವಾಗಿ ಪತ್ತೆ
8 ದಿನಗಳ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆ
 

Share this Video
  • FB
  • Linkdin
  • Whatsapp

ರೀಲ್ಸ್ ಮಾಡುವಾಗ ಕಾಲು ಜಾರಿ ಜಲಪಾತದ(Waterfall) ನೀರಿನಲ್ಲಿ ಕೊಚ್ಚಿಹೋಗಿದ್ದ ಶಿವಮೊಗ್ಗದ ಶರತ್(Sharat), ಶವವಾಗಿ ಪತ್ತೆಯಾಗಿದ್ದಾನೆ. ಸತತ 8 ದಿನಗಳ ಕಾರ್ಯಾಚರಣೆ ಬಳಿಕ ಶರತ್ ಮೃತದೇಹ ಪತ್ತೆಯಾಗಿದೆ. ಮಗ ಬದುಕಿ ಬರಬಹುದೆಂಬ ಕುಟುಂಬದ ನಿರೀಕ್ಷೆ ಸುಳ್ಳಾಗಿದೆ. ನೀರಿನಲ್ಲಿ ಕೊಚ್ಚಿಹೋದ ಶರತ್ ಪತ್ತೆಗಾಗಿ ನಿರಂತರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಆದ್ರೆ ಅರಣ್ಯ ಇಲಾಖೆ ಸಿಬ್ಬಂದಿ ಎಷ್ಟೇ ಹುಡುಕಾಡಿದ್ರೂ ಶರತ್ ಸುಳಿವು ಮಾತ್ರ ಪತ್ತೆಯಾಗಿರತಲೇ ಇಲ್ಲ. ಸತತ 8 ದಿನಗಳ ಶೋಧದ ಬಳಿಕ ನಿನ್ನೆ ಜಲಪಾತದ ಬುಡದಲ್ಲಿದ್ದ ಮರದ ಪೊಟರೆಯಲ್ಲಿ ಶರತ್ ಮೃತದೇಹ ಪತ್ತೆಯಾಗಿದೆ. ಇನ್ನೂ ಉತ್ತರ ಕನ್ನಡದ(uttara kannada) ಕುಮಟಾದಿಂದ ಶಿರಸಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದೆ. ದೇವಿಮನೆ ಘಾಟ್ ಹತ್ತಿರದ ರಾಗಿಹೊಸಳ್ಳಿ ಬಳಿ ಗುಡ್ಡ ಕುಸಿದಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಭಾರೀ ಪ್ರಮಾಣದ ಮಣ್ಣಿನ ಜತೆ ಮರಗಳು(Trees) ಧರೆಗುರುಳಿವೆ. ಹೆದ್ದಾರಿ ಬಿಟ್ಟು ಕಚ್ಚಾ ರಸ್ತೆಯಲ್ಲಿ ವಾಹನಗಳು ಸಂಚಾರ ನಡೆಸುತ್ತಿವೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರ ವರ್ಷಧಾರೆಯಿಂದಾಗಿ ಬೆಳಗಾವಿಯ ಜಲಪಾತಗಳಿಗೆ ಜೀವಕಳೆ ಬಂದಿದೆ. ಖಾನಾಪುರ ತಾಲೂಕಿನ ಚಿಕಲೆ ಫಾಲ್ಸ್‌ ಜಲವೈಭೋಗ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. 

ಇದನ್ನೂ ವೀಕ್ಷಿಸಿ: ಶಂಕಿತ ಉಗ್ರರ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು: ಜಾಹೀದ್‌ಗೆ 4 ಗ್ರೆನೇಡ್ ತಲುಪಿಸಿದ್ದ ಕೊಲೆ ಆರೋಪಿ !

Related Video