Asianet Suvarna News Asianet Suvarna News

'ಉಗ್ರಪ್ಪ, ಸಲೀಂ ಗುಟ್ಟೊಂದನ್ನ ರಟ್ಟು ಮಾಡಿದ್ದಾರೆ, ಇದರ ಹಿಂದೆ ಪಿತೂರಿ ಇದೆ'

Oct 13, 2021, 5:55 PM IST

ಬೆಂಗಳೂರು, (ಅ.13): ಡಿಕೆ ಶಿವಕುಮಾರ್ ವಿರುದ್ದ ಕಾಂಗ್ರೆಸ್‌ ನಾಯಕರ ಡೀಲ್ ಆರೋಪ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. 

ತಮ್ಮ ವಿರುದ್ಧ ಉಗ್ರಪ್ಪ-ಸಲೀಂ ಹಗರಣದ ಮಾತು ನಿಜ, ಮಾಧ್ಯಮಗಳು ತೋರಿಸಿದ್ದು ಸರಿ ಎಂದ ಡಿಕೆಶಿ

ಇನ್ನು ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯಿಸಿದ್ದು,  ಉಗ್ರಪ್ಪ, ಸಲೀಂ ಗುಟ್ಟೊಂದನ್ನ ರಟ್ಟು ಮಾಡಿದ್ದಾರೆ. ಈ ಗುಟ್ಟಿನ ಹಿಂದೆ ಪಿತೂರಿ ನಡೆದಿದೆ. ಇದರ ಹಿಂದೆ ವಿಪಕ್ಷ ನಾಯಕರ ಮೆದುಳು ಕೆಲಸ ಮಾಡಿದೆ ಎಂದು ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.