Asianet Suvarna News Asianet Suvarna News

ತಮ್ಮ ವಿರುದ್ಧ ಉಗ್ರಪ್ಪ-ಸಲೀಂ ಹಗರಣದ ಮಾತು ನಿಜ, ಮಾಧ್ಯಮಗಳು ತೋರಿಸಿದ್ದು ಸರಿ ಎಂದ ಡಿಕೆಶಿ

Oct 13, 2021, 5:10 PM IST

ಬೆಂಗಳೂರು, (ಅ.13): ಕೆಪಿಸಿಸಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಚರ್ಚೆಯೊಂದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಮಾಜಿ ಸಂಸದ ಉಗ್ರಪ್ಪ ನಡುವೆ ನಡೆದ ಸಂಭಾಷಣೆಯಲ್ಲಿ ಡಿ.ಕೆ.ಶಿವಕುಮಾರ್​, 'ಕಲೆಕ್ಷನ್ ಗಿರಾಕಿ' ಎಂದು ಸಲೀಂ ಹೇಳಿದ್ದರು.

ಡಿಕೆಶಿ ಕುರಿತ ಮಾತು ವೈರಲ್: ಸ್ಪಷ್ಟನೆ ಕೊಟ್ಟ ವಿ.ಎಸ್. ಉಗ್ರಪ್ಪ

ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆ ಮಾಜಿ ಸಂಸದ ವಿಎಸ್ ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನಿಡುವ ಮೂಲಕ ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ಪಯತ್ನಿಸಿದರು. ಆದ್ರೆ, ಇದಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಮಾಧ್ಯಮಗಳು ತೋರಿಸಿದ್ದು ಸರಿ ಇದೆ ಎಂದಿದ್ದಾರೆ. ಅವರು ಮಾತನಾಡಿದ್ದು ನಿಜ, ನೀವು ತೋರಿಸಿದ್ದೂ ನಿಜ ಎಂದರು.