Asianet Suvarna News Asianet Suvarna News

ಯಡಿಯೂರಪ್ಪ ಕಂಡ ಕೂಡಲೇ ಬೇರೆ ದಾರಿ ಹಿಡಿದ ಯೋಗೇಶ್ವರ್

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಕಂಡ ಕೂಡಲೇ ಸಚಿವ ಸಿ.ಪಿ.ಯೋಗೇಶ್ವರ್ ಅವರು ಬೇರೆ ದಾರಿಯಲ್ಲಿ ತೆರಳಿದ ಪ್ರಸಂಗ ಇಂದು ವಿಧಾನಸೌಧದಲ್ಲಿ ನಡೆಯಿತು.

ಬೆಂಗಳೂರು, (ಜು.20): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಕಂಡ ಕೂಡಲೇ ಸಚಿವ ಸಿ.ಪಿ.ಯೋಗೇಶ್ವರ್ ಅವರು ಬೇರೆ ದಾರಿಯಲ್ಲಿ ತೆರಳಿದ ಪ್ರಸಂಗ ಇಂದು ವಿಧಾನಸೌಧದಲ್ಲಿ ನಡೆಯಿತು.

'ನಾನು ಮಾತನಾಡಿದ್ರೆ ಎಚ್‌ಡಿಕೆ ಹಗಲು, ರಾತ್ರಿ ಡಿಕೆಶಿ ಸಿಎಂ ಮನೆಗೆ ಹೋಗ್ತಾರೆ'

ಕೆಂಗಲ್ ಗೇಟ್ ಮೂಲಕ ವಿಧಾನಸೌಧ ಒಳಗೆ ಪ್ರವೇಶಿಸಿದ ಯೋಗೇಶ್ವರ್, ಸಚಿವ ಅಶೋಕ್ ಜೊತೆ ಚರ್ಚೆ ಮಾಡುತ್ತಾ ನಿಂತಿದ್ದರು. ಈ ವೇಳೆ ಅದೇ ದಾರಿಯಲ್ಲಿ ಸಿಎಂ ಯಡಿಯೂರಪ್ಪ ಬರುತ್ತಿದ್ದರು. ಸಿಎಂ ಬರುತ್ತಿರುವುದನ್ನು ಕಂಡು ಯೋಗೇಶ್ವರ್ ಬೇರೆ ದಾರಿಯಲ್ಲಿ ಹೊರಟು ಹೋದರು.

Video Top Stories