ಶಾಸಕರ ಘರ್ ವಾಪ್ಸಿ ಜೊತೆ ಕಾರ್ಪೊರೇಟರ್‌ಗಳೂ ಕಾಂಗ್ರೆಸ್ ತೆಕ್ಕೆಗೆ..? ಲೋಕಲ್ ರಾಜಕಾರಣದಲ್ಲಿ ಸಂಚಲನ !
ಬಿಜೆಪಿಯ 30ಕ್ಕೂ ಹೆಚ್ಚು ಮಹಾನಗರ ಪಾಲಿಕೆ ಸದಸ್ಯರ ಪಕ್ಷಾಂತರ
ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ ಮಾಜಿ ಸದಸ್ಯರು
ಗೆಲ್ಲಲು ಸಾಧ್ಯವಿಲ್ಲದ ಕಡೆ ಬಿಜೆಪಿಯವರನ್ನು ಸೆಳೆಯಲು ತಂತ್ರ
ಬೆಂಗಳೂರು: ಗುತ್ತಿಗೆಗಳ ತನಿಖೆ ಮಾಡಿಸುತ್ತೇವೆ ಎನ್ನುತ್ತಿದ್ದಂತೆ ಹೆದರಿದಂತೆ ಕಾಣುತ್ತಿರುವ ಕಾರ್ಪೊರೇಟರ್ಸ್, ಕಾಂಗ್ರೆಸ್‌ಗೆ(Congress) ಹೋಗಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಇದೀಗ ಲೋಕಲ್ ರಾಜಕಾರಣದಲ್ಲಿ(politics) ಸಂಚಲನ ಸೃಷ್ಟಿಯಾಗಿದೆ. ಬಿಜೆಪಿಯ 30ಕ್ಕೂ ಹೆಚ್ಚು ಮಹಾನಗರ ಪಾಲಿಕೆ ಸದಸ್ಯರು ಪಕ್ಷಾಂತರ ಮಾಡಲಿದ್ದಾರೆ ಎನ್ನಲಾಗ್ತಿದೆ. ಅಲ್ಲದೇ ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲದ ಕಡೆ ಬಿಜೆಪಿಯವರನ್ನೇ(BJP) ಸೆಳೆಯಲು ತಂತ್ರ ರೂಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇದರಿಂದ ಬಿಬಿಎಂಪಿ ಚುನಾವಣೆಗೆ(BBMP Election) ಲಾಭ ಆಗಲಿದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಜೊತೆಗೆ ಲೋಕಸಭೆಯಲ್ಲೂ ಲಾಭ ಆಗಬಹುದು ಎನ್ನಲಾಗ್ತಿದೆ.
ಇದನ್ನೂ ವೀಕ್ಷಿಸಿ: ಮೈಸೂರಲ್ಲಿ ಮಹಿಷ ದಸರಾಗೆ ಭರ್ಜರಿ ಸಿದ್ಧತೆ: ಚಾಮುಂಡಿ ಬೆಟ್ಟದಲ್ಲೇ ತಯಾರಿ !