ಜಗದೀಶ್‌ ಶೆಟ್ಟರ್‌ ವಿರುದ್ಧ ಯಾವ ಷಡ್ಯಂತ್ರ ಸಹ ನಡೆಯಲ್ಲ: ಡಿಕೆಶಿ ಆಕ್ರೋಶ

ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ನ ಸ್ಟಾರ್‌ ಕ್ಯಾಂಪೇನರ್‌ ಆಗಿದ್ದಾರೆ. ಅವರ ವಿರುದ್ಧ ಮಾಡುವ ಯಾವ ಷಡ್ಯಂತ್ರ ಸಹ ನಡೆಯುವುದಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಲೇವಡಿ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರುತ್ತಿದೆ.ಲಿಂಗಾಯತ ನಾಯಕರು ಕಾಂಗ್ರೆಸ್‌ ಸೇರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಬಿಜೆಪಿಯವರ ಡ್ಯಾಮ್‌, ಕೆರೆ ಒಡೆದು ನೀರು ಹರಿಯುತ್ತಿದೆ. ಆ ನೀರು ಸಮುದ್ರವನ್ನು ಸೇರುತ್ತಿದೆ. ಅವರು ಏನ್‌ ಬೇಕಾದ್ರೂ ಮಾಡಲಿ, ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಪಕ್ಷದ ಸ್ಟಾರ್‌ ಕ್ಯಾಂಪೇನರ್‌ ಮತ್ತು ಹಿರಿಯ ನಾಯಕರು. ಬಿಜೆಪಿಯವರು ಅವರ ವಿರುದ್ಧ ಮಾಡುವ ಯಾವ ಷಡ್ಯಂತ್ರ ಕೂಡ ನಡೆಯುವುದಿಲ್ಲ ಎಂದು ಡಿಕೆಶಿ ಲೇವಡಿ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಕೈ- ಕಮಲ ಪಾಳಯದಿಂದ ಹೊರಬಂದ ಘಟಾನುಘಟಿಗಳು: ಟಿಕೆಟ್‌ ನೀಡಿ ದಾಳ ಉರಿಳಿಸಿದ ಜೆಡಿಎಸ್‌

Related Video