"ಆಪರೇಷನ್ ಕೈ" ಖೆಡ್ಡಾಗೆ ಬೀಳ್ತಾರಾ ಜಂಪಿಂಗ್ ಸ್ಟಾರ್ಸ್ ? ಮರಳಿ ಗೂಡಿಗೆ ಮಿತ್ರಮಂಡಳಿ, ಯಾರಿಗೆಲ್ಲಾ "ಬಂಡೆ" ಬಲೆ..?

ಬಾಂಬೆ ಬಾಯ್ಸ್ ಘರ್ ವಾಪಸಿಗೆ ರೆಡಿಯಾಯ್ತಾ ಖೆಡ್ಡಾ..?
ಡಿಕೆಶಿ ನನ್ನ ಗುರು ಅಂದಿದ್ದೇಕೆ ಬಿಜೆಪಿ ಶಾಸಕ..?
'ಆಪರೇಷನ್ ಕೈ'ಖೆಡ್ಡಾಗೆ ಬೀಳ್ತಾರಾ ಜಂಪಿಂಗ್ ಸ್ಟಾರ್ಸ್..?

First Published Aug 17, 2023, 12:46 PM IST | Last Updated Aug 17, 2023, 12:46 PM IST

ಮತ್ತೊಂದು ಕ್ಷಿಪ್ರಕ್ರಾಂತಿಗೆ ಸಾಕ್ಷಿಯಾಗಲಿದ್ಯಾ ಕರ್ನಾಟಕ ರಾಜಕಾರಣ ಎಂಬ ಅನುಮಾನ ಇದೀಗ ಮೂಡಿದೆ. ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಆಪರೇಷನ್ ಆಟದ ಸದ್ದು ಕೇಳ್ತಾ ಇದೆ. ಆಪರೇಷನ್ ಅಂದಾಕ್ಷಣ ಬಿಜೆಪಿಯ(BJP) ಆಪರೇಷನ್ ಕಮಲ ಕಣ್ಮುಂದೆ ಬರತ್ತೆ. ಕಾರಣ ಕರ್ನಾಟಕದ(Karnataka) ರಾಜಕೀಯ ಚರಿತ್ರೆಯಲ್ಲಿ ದಾಖಲಾಗಿರೋ ಆಪರೇಷನ್ ಅಧ್ಯಾಯಗಳು. ಆದರೆ ಈ ಬಾರಿ ಆಪರೇಷನ್(Operation) ಕಹಳೆ ಮೊಳಗಿರೋದು ಕೇಸರಿ ಕೋಟೆಯಿಂದಲ್ಲ, ಕಾಂಗ್ರೆಸ್(Congress) ಪಾಳೆಯದಿಂದ. ಲೋಕಸಭಾ ಚುನಾವಣೆಗೆ ತಯಾರಿ ನಡೆಸ್ತಾ ಇರೋ ಕಾಂಗ್ರೆಸ್, ಬಿಜೆಪಿಯ ಹಾಲಿ ಶಾಸಕರನ್ನೇ ಪಕ್ಷಕ್ಕೆ ಸೆಳೆಯಲು ಮುಂದಾಗಿದೆ ಅನ್ನೋ ರೋಚಕ ಮಾಹಿತಿ ಲಭ್ಯವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಕರ್ನಾಟಕದಲ್ಲಿ ಕನಿಷ್ಠ 20 ಸೀಟುಗಳನ್ನು ಗೆಲ್ಲೋ ಟಾರ್ಗೆಟ್ ಇಟ್ಟುಕೊಂಡಿದೆ. ಸಿಎಂ ಮತ್ತು ಡಿಸಿಎಂ ಈಗಾಗ್ಲೇ 20 ಸೀಟುಗಳನ್ನು ಗೆದ್ದೇ ಗೆಲ್ಲುವ ಶಪಥ ಮಾಡಿದ್ದಾರೆ. ಆ ಶಪಥ ಈಡೇರ್ಬೇಕು ಅಂದ್ರೆ ಲೋಕಸಂಗ್ರಾಮದಲ್ಲಿ ಕಾಂಗ್ರೆಸ್ ಸೈನ್ಯಕ್ಕೆ ಮತ್ತಷ್ಟು ಶಕ್ತಿ ಬೇಕು. ಆ ಶಕ್ತಿಯನ್ನು ಪ್ರತಿಪಕ್ಷ ಬಿಜೆಪಿಯಿಂದಲೇ ಸೆಳೆಯಲು ಕೈ ನಾಯಕರು ಮುಂದಾಗಿದೆ. 

ಇದನ್ನೂ ವೀಕ್ಷಿಸಿ:  'ಲೋಕ' ಗೆಲುವಿಗೆ ಬಿಜೆಪಿ ಪ್ಲಾನ್: 18 ರಾಜ್ಯಸಭಾ ಸದಸ್ಯರಿಗೆ ಟಿಕೆಟ್ ಸಾಧ್ಯತೆ ?