Congress Manifesto: ಕರ್ನಾಟಕ, ತೆಲಂಗಾಣ ಮಾದರಿಯಲ್ಲೇ..ದೇಶಕ್ಕೂ ಪ್ರಣಾಳಿಕೆ: ಯುವ ಜನತೆಗೆ 5,000 ಕೋಟಿ ರೂ. ಸ್ಟಾರ್ಟಪ್ ಫಂಡ್!
ಯುವ..ನಾರಿ..ಕಿಸಾನ್..ಶ್ರಮಿಕ್..ಸಮಾನತೆ ನ್ಯಾಯ
30 ಲಕ್ಷ ಸರ್ಕಾರಿ ಉದ್ಯೋಗಗಳ ಭರ್ತಿ ಮಾಡುವ ಭರವಸೆ
ಬಡ ಕುಟುಂಬ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂ ಧನ ಸಹಾಯ
ಮನ್ರೇಗಾ ಯೋಜನೆ ಅಡಿ ಕಾರ್ಮಿಕರಿಗೆ 400 ರೂ ದಿನಗೂಲಿ
ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ತನ್ನ ಪ್ರಣಾಳಿಕೆ(Manifesto) ಬಿಡುಗಡೆಗೊಳಿಸಿದೆ. ಎಲ್ರು ಊಹಿಸಿದಂತೆ, ಕಾಂಗ್ರೆಸ್(Congress) ಗ್ಯಾರಂಟಿಗಳ ಮೇಲೆ ಲೋಕಸ ಸಮರ ಗೆಲ್ಲುವ ಇಚ್ಛೆಯಲ್ಲಿದೆ. ಇದು ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆ ಉದ್ದಕ್ಕೂ ಬರೀ ಗ್ಯಾರಂಟಿಗಳನ್ನೇ(Guarantees) ಘೋಷಣೆ ಮಾಡಿದೆ. ಲೋಕಸಭಾ ಚುನಾವಣಾ ಅಖಾಡ ರಂಗೇರಿದೆ. ದೇಶಾದ್ಯಂತ ಎಲೆಕ್ಷನ್ ಕಾವು ಹೆಚ್ಚಾಗಿದೆ. ಮೋದಿಯನ್ನು ಸೋಲಿಸಲು I.N.D.I.A ಒಕ್ಕೂಟ ತಂತ್ರಗಳ ಮೇಲೆ ತಂತ್ರಗಳನ್ನು ಹುಡುಕುತ್ತಿದೆ. ಹಾಗೆನೇ ದೇಶದವನ್ನು ಗೆಲ್ಲಲು ಮೋದಿ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಇದರ ಮಧ್ಯೆ ಎಲ್ಲರ ಊಹೆಯಂತೆ ಕಾಂಗ್ರೆಸ್ ಪಕ್ಷ ಕರ್ನಾಟಕ ಮತ್ತು ತೆಲಂಗಾಣ ಮಾದರಿಯಲ್ಲೇ ದೇಶಕ್ಕೂ ಪ್ರಣಾಳಿಕೆಯನ್ನು ಕೊಟ್ಟಿದೆ. ರಾಜ್ಯದಲ್ಲಿ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ಗೆದ್ದುಕೊಂಡಿತ್ತು. ರಾಜ್ಯದ ಜನರಿಗೆ ಪ್ರಮುಖ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಘೋಷಣೆ ಮಾಡಿತ್ತು. ಉಚಿತ ಗ್ಯಾರಂಟಿಗಳಿಗೆ ಮನಸ್ಸೋತ ರಾಜ್ಯ ಮತದಾರ ಪ್ರಭು, ಕಾಂಗ್ರೆಸ್ ಪಕ್ಷವನ್ನು ವಿಧಾನಸೌಧದ ಗದ್ದುಗೆ ಮೇಲೆ ಕೂರಿಸಿದ್ದರು. ಈ ಎರಡು ರಾಜ್ಯದಲ್ಲಿ ಗ್ಯಾರಂಟಿಗಳ ಮೇಲೆ ಗೆದ್ದು ಬೀಗಿದ್ದ ಕಾಂಗ್ರೆಸ್ ಪಕ್ಷ, ಲೋಕಸಭೆ ಚುನಾವಣೆಯಲ್ಲೂ ಇದೇ ಗ್ಯಾರಂಟಿಗಳ ತಂತ್ರ ಬಳಸುತ್ತೆ ಎಂದು ಊಹಿಸಲಾಗಿತ್ತು. ಯಶಸ್ವಿಯಾಗಿ ಗೆದ್ದಿರುವ ಕರ್ನಾಟಕ(Karnataka) ಮತ್ತು ತೆಲಂಗಾಣ(Telangana) ಮಾದಯನ್ನೇ ಲೋಕಸಭಾ ಚುನಾವಣೆಗೂ ಕಾಂಗ್ರೆಸ್ ಬಳಸಿಕೊಳ್ಳಬಹುದು ಎಂದು ಹೇಳಲಾಗುತ್ತಿತ್ತು. ಆ ಎಲ್ಲ ಊಹೆಯಂತೆ ಕಾಂಗ್ರೆಸ್ ಇಂದು ಅದೇ ಮಾದರಿಯಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಿದೆ.
ಇದನ್ನೂ ವೀಕ್ಷಿಸಿ: Turning Point : ಬೆಚ್ಚಿಬೀಳಿಸಿತ್ತು ಭಿಂದ್ರನ್‌ವಾಲೆಯ ಬೇಡಿಕೆ! ಪಂಜಾಬಿನ ರಕ್ತಪಾತದ ಹಿಂದೆ ರಾಜಕಾರಣದ ನೆರಳು!