Asianet Suvarna News Asianet Suvarna News

Turning Point : ಬೆಚ್ಚಿಬೀಳಿಸಿತ್ತು ಭಿಂದ್ರನ್‌ವಾಲೆಯ ಬೇಡಿಕೆ! ಪಂಜಾಬಿನ ರಕ್ತಪಾತದ ಹಿಂದೆ ರಾಜಕಾರಣದ ನೆರಳು!

ಇಂದಿರಾ ಗಾಂಧಿ ಭಿಂದ್ರನ್ವಾಲೆ ಬಗ್ಗೆ ಆಸಕ್ತಿ ತೋರಿಸದ್ದು ಯಾಕೆ?ಹೇಗೆ?
ಇಂದಿರಾ ಸರ್ಕಾರದ ಆ ನಿರ್ಧಾರ, ಅಗ್ನಿಗೋಳವಾಯ್ತು ಪಂಜಾಬ್..!
ಖಲಿಸ್ತಾನದ ಬೇಡಿಕೆ ಇಟ್ಟನೇಕೆ 'ಉಗ್ರ ಸಂತ' ಭಿಂದ್ರನ್‍ವಾಲೆ..?

ಸ್ವತಂತ್ರ ಭಾರತದ ಅತಿ ಭಯಾನಕ ರಕ್ತಸಿಕ್ತ ಅಧ್ಯಾಯ.. 1984ರ ಜೂನ್ 1ನೇ ತಾರೀಖು, ಪಂಜಾಬಿನಲ್ಲಿರೋ(Punjab) ಅಮೃತಸರದ ಸ್ವರ್ಣ ಮಂದಿರದಲ್ಲಿ(Golden Temple) ನಡೀಬಾರದ ಘಟನೆ ನಡೆದುಹೋಗಿತ್ತು. ಸಿಖ್ಖರ(Sikhs) ಪವಿತ್ರಭೂಮಿಯ ಮೇಲೆ ಗುಂಡಿನ ಸುರಿಮಳೆ ಸುರಿದಿತ್ತು. ರಕ್ತದ ಹೊಳೆ ಹರಿದಿತ್ತು. ಅಲ್ಲಿದ್ದ ಜನ ಒಳಗೆ ಏನಾಗ್ತಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳೋದ್ರಲ್ಲಿ 8 ಮಂದಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಹಾಗಂತ ಆ ದಾಳಿ ನಡೆಸಿದ್ದು ಉಗ್ರರಾ? ಅಲ್ಲ. ಇಂಡಿಯನ್ ಸೆಕ್ಯುರಿಟಿ ಫೋರ್ಸ್. ಅವರನ್ನ ಆ ದಾಳಿಗೆ ನೇಮಿಸಿದ್ದು ಯಾರು? ಅವತ್ತಿನ ಪ್ರಧಾನಿ, ಉಕ್ಕಿನ ಮಹಿಳೆ, ಇಂದಿರಾ ಗಾಂಧಿ(Indira Gandhi).ಭಾರತವನ್ನ ಛಿದ್ರಗೊಳಿಸೋಕೆ ಹೊರಟವರಿಗೆ ಅವತ್ತು ಸಮಾಧಿ ಕಟ್ಟೋ ಕೆಲಸ ಮಾಡಿದ್ರು ಇಂದಿರಾ.. ಅವರು ಅಂದುಕೊಂಡಿದ್ದನ್ನ ಅವತ್ತಿಗೆ ಸಾಧಿಸಿದ್ದಾಗಿತ್ತು. ಅದರ ಬೆನ್ನಲ್ಲೇ, ಯಾರೂ ಊಹಿಸದೇ ಇದ್ದ ಇನ್ನೊಂದು ಘಟನೆಯೂ ನಡೆದು ಹೋಯ್ತು.1984ರ ಅಕ್ಟೋಬರ್ 1ನೇ ತಾರೀಖು, ಇಂದಿರಾ ಗಾಂಧಿ ಅವರ ದಾರುಣ ಹತ್ಯೆಯಾಗುತ್ತೆ.. ಇಡೀ ಭಾರತವೇ ಕಣ್ಣೀರು ಸುರಿಸುತ್ತೆ.. ಆಲ್ ಮೋಸ್ಟ್ 16 ವರ್ಷ ದೇಶವಾಳಿದ ಗಟ್ಟಿಗಿತ್ತಿ, ದಿಟ್ಟನಾಯಕಿ, ಉಕ್ಕಿನ ಮಹಿಳೆ ಇಂದಿರಾ, 66ನೇ ವಯಸ್ಸಿಗೆ ಹೀಗೆ ಕೊಲೆಯಾಗಿಬಿಡ್ತಾರೆ.. 

ಇದನ್ನೂ ವೀಕ್ಷಿಸಿ:  ಪಾಕ್‌ನಲ್ಲಿ ಉಗ್ರರ ಹತ್ಯೆಗೆ ಆದೇಶಿಸಿತ್ತಾ ಕೇಂದ್ರ ಸರ್ಕಾರ ? ಇದರ ಹಿಂದಿದೆ ಮೋದಿ ಸರ್ಕಾರ ಎಂದ UK ಪತ್ರಿಕೆ!

Video Top Stories