ನನ್ನ ಮೊದಲ ಲೋಕಸಭಾ ಚುನಾವಣೆಗೆ ಎದುರು ನೋಡುತ್ತಿದ್ದೇನೆ: ರಾಜೀವ್ ಚಂದ್ರಶೇಖರ್
ನನ್ನ ರಾಜಕೀಯ ಜೀವನದ ಇನ್ನೊಂದು ರೋಚಕ ಹಂತ ಇದಾಗಿದೆ. ನನ್ನ ಮೊದಲ ಲೋಕಸಭಾ ಚುನಾವಣೆಗೆ ಎದುರು ನೋಡುತ್ತಿದ್ದೇನೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಲೋಕಸಭೆಗೆ ಸ್ಪರ್ಧಿಸ್ತಾರಾ ಎಂದು ಹೇಳಲಾಗುತ್ತಿದೆ. ಲೋಕಸಭಾ (Loksabha) ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ. PTI ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ರಾಜೀವ್ ಚಂದ್ರಶೇಖರ್(Rajeev Chandrasekhar) ಈ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಕರ್ನಾಟಕ ರಾಜ್ಯಸಭಾ (Rajyasabha) ಸ್ಥಾನದಿಂದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ನಿವೃತ್ತರಾಗಿದ್ದರು. ನನ್ನ ರಾಜಕೀಯ ಜೀವನದ ಇನ್ನೊಂದು ರೋಚಕ ಹಂತ ಇದಾಗಿದೆ. ನನ್ನ ಮೊದಲ ಲೋಕಸಭಾ ಚುನಾವಣೆಗೆ ಎದುರು ನೋಡುತ್ತಿದ್ದೇನೆ. ಕ್ಷೇತ್ರ ಯಾವುದು ಎನ್ನುವುದನ್ನು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ. ಲೋಕಸಭಾ ಸದಸ್ಯರಾಗಲು ತಳಮಟ್ಟದ ಅನುಭವ ಹೊಂದಿರಬೇಕು. ಜನರೊಂದಿಗೆ ಸಂಪರ್ಕ ಬೇಕು, ಜವಾಬ್ದಾರಿಯುತ ರಾಜಕಾರಣಿಗಳಾಗಿರಬೇಕು. ನಾನು ಅದಕ್ಕೆ ಸಮರ್ಥನಾಗಿದ್ದೇನೆ ಎಂದು ನನ್ನ ನಾಯಕತ್ವ ಭಾವಿಸಿದೆ. ಪಕ್ಷದ ನಾಯಕತ್ವ ಹೇಳಿದ ಕಡೆ ನಾನು ಹೋರಾಡಿ ಗೆಲ್ಲುತ್ತೇನೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ: ಕರ್ನಾಟಕದಿಂದ 530 ಮಂದಿಗೆ ಹೈಕಮಾಂಡ್‌ನಿಂದ ಆಹ್ವಾನ