Karnataka Election Results:ಕಾಂಗ್ರೆಸ್‌ ನಾಯಕರು ಈಗಾಗಲೇ ಸೂಟು ಬೂಟು ಹೊಲಿಸಿದ್ದಾರೆ: ಕುಮಾರಸ್ವಾಮಿ

ನಾವು 30-32 ಸೀಟ್‌ ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳಿವೆ. ಹಾಗಾಗಿ ನಮಗೆ ಬೇಡಿಕೆ ಇಲ್ಲ. ಇನ್ನೂ ಸ್ವಲ್ಪ ಗಂಟೆಗಳಲ್ಲೇ ಫಲಿತಾಂಶವೇನು ಎಂಬುದು ತಿಳಿಯಲಿದೆ ಎಂದು ಹೆಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಜನ ಅಸ್ಥಿರತೆ ಬಯಸುವುದಿಲ್ಲ. ಈಗಾಗಲೇ ಕಾಂಗ್ರೆಸ್‌ ನಾಯಕರು ಸೂಟು ಬೂಟು ಹೊಲಿಸಿಕೊಂಡಿರುತ್ತಾರೆ. ಅವರು ಪ್ರಮಾಣ ವಚನ ತೆಗೆದುಕೊಳ್ಳುವುದೊಂದೇ ಬಾಕಿ ಇರುವುದು. ಈಗಾಗಲೇ ಅವರು ಮೇಲೆ ಇದ್ದಾರೆ. ನನ್ನನ್ನು ಯಾವ ನಾಯಕರು ಸಂಪರ್ಕಿಸಿಲ್ಲ. ನಾನು ಯಾರನ್ನೂ ಸಂಪರ್ಕಿಸಿಲ್ಲ. ನನ್ನ ಪಾಡಿಗೆ ನಾನು ಸಿಂಗಾಪುರಕ್ಕೆ ಹೋಗಿದ್ದೆ. ಅದು ಕೂಡ ವಿಶ್ರಾಂತಿ ಪಡೆಯಲು. ಸದ್ಯ ನಾನು ಚುನಾವಣಾ ಫಲಿತಾಂಶವನ್ನು ಎದುರು ನೋಡುತ್ತಿದ್ದೇನೆ ಎಂದು ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಗದ್ದುಗೆ ಗುದ್ದಾಟದಲ್ಲಿ ಗೆದ್ದು ಬೀಗುವ ರಣಕಲಿ ಯಾರು..?

Related Video