ಗದ್ದುಗೆ ಗುದ್ದಾಟದಲ್ಲಿ ಗೆದ್ದು ಬೀಗುವ ರಣಕಲಿ ಯಾರು..?

ಈ ಬಾರಿಯ ಕರ್ನಾಟಕ ಕುರುಕ್ಷೇತ್ರ ಗೆದ್ದು ರಾಜ್ಯ ಗದ್ದುಗೆ ಏರುವ ಪಕ್ಷ ಯಾವುದು ಎನ್ನುವ ಪ್ರಶ್ನೆ ರಾಜ್ಯದ ಉದ್ದಗಲದಲ್ಲೂ ಇದೆ. ಬಿಜೆಪಿ ಗೆಲ್ಲುತ್ತಾ.., ಕಾಂಗ್ರೆಸ್ ಮರಳಿ ಅಧಿಕಾರ ಪಡೆಯುತ್ತಾ..? ಇಬ್ಬರ ಜಗಳದಲ್ಲಿ ಮತ್ತೆ ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ..? 

Share this Video
  • FB
  • Linkdin
  • Whatsapp

ಈ ಬಾರಿಯ ಕರ್ನಾಟಕ ಕುರುಕ್ಷೇತ್ರ ಗೆದ್ದು ರಾಜ್ಯ ಗದ್ದುಗೆ ಏರುವ ಪಕ್ಷ ಯಾವುದು ಎನ್ನುವ ಪ್ರಶ್ನೆ ರಾಜ್ಯದ ಉದ್ದಗಲದಲ್ಲೂ ಇದೆ. ಬಿಜೆಪಿ ಗೆಲ್ಲುತ್ತಾ.., ಕಾಂಗ್ರೆಸ್ ಮರಳಿ ಅಧಿಕಾರ ಪಡೆಯುತ್ತಾ..? ಇಬ್ಬರ ಜಗಳದಲ್ಲಿ ಮತ್ತೆ ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ..? ಈ ಯಕ್ಷಪ್ರಶ್ನೆಗೆ ಇಂದು ಉತ್ತರ ಸಿಗುವ ದಿನ. ಅದಕ್ಕೂ ಮೊದಲು ರಾಜಕೀಯ ನಾಯಕರಲ್ಲಿ ಒಬ್ಬೊಬ್ಬರದ್ದು ಒಂದೊಂದು ವಿಶ್ಲೇಷಣೆ, ಒಂದೊಂದು ಲೆಕ್ಕಾಚಾರ.Ballet is stronger than bullet ಅಂತಿರೋ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಗೆಲುವನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎನ್ನುವ ಅಧಮ್ಯ ವಿಶ್ವಾಸದಲ್ಲಿದ್ದಾರೆ. ಡಿಕೆಶಿ ವಿಶ್ವಾಸಕ್ಕೆ ಎಕ್ಸಿಟ್ ಪೋಲ್'ಗಳು, ಅಂದ್ರೆ ಚುನಾವಣೋತ್ತರ ಸಮೀಕ್ಷೆಗಳು ಬಲ ತಂದು ಕೊಟ್ಟಿವೆ. ಆದರೆ ಎಕ್ಸಿಟ್ ಪೋಲ್'ಗಳೆಲ್ಲಾ ಸುಳ್ಳಾಗಿ ಬಿಜೆಪಿಯೇ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಆಗಲಿದೆ ಅಂತಿದ್ದಾರೆ ಕೇಸರಿ ಕಲಿಗಳು.. ಬಂದಿರೋ ಬಹುತೇಕ ಎಕ್ಸಿಟ್ ಪೋಲ್'ಗಳು ಕಾಂಗ್ರೆಸ್ ಸಿಂಗಲ್ ಲಾರ್ಜೆಸ್ಟ್ ಪಕ್ಷ ಆಗಲಿದೆ ಅಂತ ಹೇಳುತ್ತಿವೆ ಮ್ಯಾಜಿಕ್ ನಂಬರ್ 113ನ್ನು ಪಡೆದು ಸರಳ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೇರಲಿದೆ ಅಂತ ಕೆಲ ಸಮೀಕ್ಷೆಗಳು ಹೇಳಿವೆ. . 

Related Video