Asianet Suvarna News Asianet Suvarna News

ಸೇನಾಪತಿಗಳ ಒತ್ತಾಸೆಗೆ ಓಕೆ ಅನ್ನುತ್ತಾ ಹಸ್ತ ಹೈಕಮಾಂಡ್? ಲೋಕಸಮರಕ್ಕೆ ಸಜ್ಜಾಗುತ್ತಿದೆ ರಾಜ್ಯದ ಅಖಾಡ!

ಲೋಕ ಸಮರ ಗೆಲ್ಲಿಸಿಕೊಡುತ್ತಾ ಕಾಂಗ್ರೆಸ್ ನಾಯಕರ ಒತ್ತಡ?
ಕಾಂಗ್ರೆಸ್ ಹೆಣೆದ ರಣತಂತ್ರ..ಎದುರಾಳಿಗೆ ಏನು ಸಂದೇಶ..?
ಹೈಕಮಾಂಡ್ ಮುಂದೆ ವಿಚಿತ್ರ ಬೇಡಿಕೆ ಇಟ್ಟರಂತೆ ಶಾಸಕರು!
ಮಕ್ಕಳಿಗೆ ಟಿಕೆಟ್ ಕೊಡಿ ಅಂತಿದ್ದಾರಂತೆ ಸಚಿವರು?ಯಾಕಂತೆ?

ರಾಷ್ಟ್ರ ರಾಜಕಾರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗ್ತಾ ಇದೆ. ಈಗಿರೋ ಬ್ರೇಕಿಂಗ್ ನ್ಯೂಸ್ ಈಗಲೇ ಹಳೇದಾಗ್ತಾ ಇದೆ. ಒಂದು ಕಡೆ ಕಾಂಗ್ರೆಸ್(Congress) ಮತ್ತೊಂದು ಕಡೆ, ಬಿಜೆಪಿ(BJP), ಜೆಡಿಎಸ್(JDS) ಮೈತ್ರಿ ಪಡೆ ಇಬ್ಬರ ಮಧ್ಯೆ, ಬಿರುಸಾಗಿಯೇ ಸಾಗ್ತಾ ಇದೆ, ರೋಚಕ ಕದನ. ಇನ್ನೂ ಲೋಕಸಮರಕ್ಕೆ ನೂರು ದಿನ ಕೂಡ ಉಳಿದಿಲ್ಲ. ಅಷ್ಟರಲ್ಲಿ ಅಷ್ಟ್ರೊಳಗೆ ತಂತ್ರಗಾರಿಕೆ ರೂಪಿಸಿಕೊಂಡು ಅಖಾಡ ಪ್ರವೇಶಿಸಬೇಕಿವೆ ರಾಜಕೀಯ ಪಕ್ಷಗಳು. ಅದರ ಒಂದು ಪ್ರಮುಖ ಭಾಗವೇ, ಮಹಾಘಟಬಂಧನ್, ಅರ್ಥಾತ್ ಐಎನ್‌ಡಿಐಎ ಒಕ್ಕೂಟ. ಆ ಒಕ್ಕೂಟದ ಕತೆ ಸದ್ಯಕ್ಕೆ ಏನು ಅನ್ನೋದು ನಿಮಗೇ ಗೊತ್ತಿದೆ. ಆ ಇಂಡಿ ಮೈತ್ರಿ ರಚನೆಗೆ ಮುಂದಾದ ದೀದಿ- ಮೈತ್ರುಕೂಟಕ್ಕೆ ಹೆಸರು ಓಕೆ ಮಾಡಿದ ನಿತೀಶ್, ಈಗಾಗ್ಲೇ ಮೈತ್ರಿಯಿಂದ ದೂರ ಸರಿದಿದ್ದಾಗಿದೆ. ಇದೇ ಕಾರಣಕ್ಕೆ, ಕಾಂಗ್ರೆಸ್ ತನ್ನ ದೊಡ್ಡ ಗೆಲುವಿಗೆ ಮತ್ತಷ್ಟು ಕಸರತ್ತು ನಡೆಸಬೇಕಾಗಿದೆ. ಕರ್ನಾಟಕ(Karnataka) ಸದ್ಯಕ್ಕಂತೂ ಕಾಂಗ್ರೆಸ್ ಪಾಲಿಗೆ ಬಲಭದ್ರ ಕೋಟೆ. ಸಿದ್ದರಾಮಯ್ಯ(Siddaramaiah) ಸರ್ಕಾರ, ಡಿಕೆ ಶಿವಕುಮಾರ್ ಹೊಣೆಗಾರಿಕೆ ಕಾಂಗ್ರೆಸ್‌ಗೆ ಗಜಬಲವನ್ನಂತೂ ತಂದಿದೆ. ಹಾಗಾಗಿನೇ, ಇಲ್ಲಿರೋ ಒಟ್ಟು, 28 ಕ್ಷೇತ್ರಗಳ ಪೈಕಿ, ಕನಿಷ್ಟ 15ರಿಂದ 20 ಸೀಟುಗಳಲ್ಲಿ ಗೆಲುವು ಸಾಧಿಸಬೇಕು ಅನ್ನೋ ಟಾಸ್ಕ್, ರಾಜ್ಯ ಕಾಂಗ್ರೆಸ್ ನಾಯಕರ ಮುಂದಿದೆ.

ಇದನ್ನೂ ವೀಕ್ಷಿಸಿ:  Belagavi: ಪಾಗಲ್ ಪ್ರೇಮಿ ಹುಚ್ಚಾಟಕ್ಕೆ ಯುವತಿ ಬದುಕು ಬರ್ಬಾದ್..! ಆರು ವರ್ಷ ಪ್ರೀತಿಸಿ ಕೈಕೊಟ್ಟ ಕಿರಾತಕ !

Video Top Stories