Belagavi: ಪಾಗಲ್ ಪ್ರೇಮಿ ಹುಚ್ಚಾಟಕ್ಕೆ ಯುವತಿ ಬದುಕು ಬರ್ಬಾದ್..! ಆರು ವರ್ಷ ಪ್ರೀತಿಸಿ ಕೈಕೊಟ್ಟ ಕಿರಾತಕ !

ಬೇರೆ ಹುಡುಗನ ಜೊತೆಗೆ ಸಪ್ತಪದಿ ತುಳಿದ ಯುವತಿ
ಮದುವೆ ಮನೆಯಲ್ಲಿ ಪಾಗಲ್ ಪ್ರೇಮಿ ಹೈಡ್ರಾಮಾ
ಮದುವೆ ಆದ ದಿನವೇ ನೀ ನನಗೆ ಬೇಡ ಎಂದ ವರ
ಪಾಗಲ್ ಪ್ರೇಮಿ ಮನೆ ಎದುರು ಯುವತಿ ಧರಣಿ
 

Share this Video
  • FB
  • Linkdin
  • Whatsapp

ಅವರಿಬ್ಬರದ್ದು 6 ವರ್ಷದ ಪ್ರೀತಿ. ಆದ್ರೆ 6 ವರ್ಷ ಪ್ರೀತಿಸಿದವರು ಮೊನ್ನೆ ಮೊನ್ನೆಯಷ್ಟೇ ಬ್ರೇಕ್ ಅಪ್ ಮಾಡಿಕೊಂಡಿದ್ರು. ಪ್ರೇಮಿ(Lover) ಅಂತೂ ನಿನ್ನನ್ನೇ ಮದುವೆಯಾಗ್ತೀನಿ. ನೀನೇ ನನಗೆಲ್ಲಾ ಅಂತೆಲ್ಲಾ ಹೇಳಿ ಯುವತಿಯನ್ನ ನಂಬಿಸಿ ಆಕೆಯೊಂದಿಗೆ ಖಾಸಗಿ ಕ್ಷಣಗಳನ್ನ ಕಳೆದಿದ್ದ. ಅವನನ್ನ ಯುವತಿ(Woman) ಅತಿಯಾಗಿ ನಂಬಿಬಿಟ್ಟಿದ್ದಳು. ಆದ್ರೆ ಯಾವಾಗ ಆತ ಬ್ರೇಕ್ ಅಪ್ ಅಂದನೋ ಹೆತ್ತವರಿಗಾಗಿ ಬೇರೆ ಮದುವೆಯಾಗೋದಕ್ಕೆ(Marriage) ಓಕೆ ಅಂದಿದ್ಲು. ಆದ್ರೆ ಇವತ್ತು ಗಂಡನ ಮನೆಯಲ್ಲಿರಬೇಕಿದ್ದವಳು ವಾಪಸ್ ತನ್ನ ಪ್ರೇಮಿಯ ಮನೆ ಮುಂದೆ ಬಂದು ಕೂತಿದ್ದಾಳೆ. ನನಗೆ ನ್ಯಾಯ ಬೇಕು ಅಂತ ಕಣ್ಣೀರು ಇಡುತ್ತಿದ್ದಾಳೆ. 6 ವರ್ಷದ ಪ್ರೀತಿಯಲ್ಲಿ(Love) ಎಲ್ಲವೂ ನಡೆದು ಹೋಗಿತ್ತು. ಇನ್ನೂ ಕಿರಾತಕ ಮುತ್ತು ಪ್ರೇಯಸಿಯ ಖಾಸಗಿ ಫೋಟೋಗಳನ್ನೇ(Private Photos) ಸೆರೆ ಹಿಡಿದು ಇಟ್ಟುಕೊಂಡಿದ್ದ. ಆದ್ರೆ ಯಾವಾಗ ಮದುವೆ ಮಾತುಕತೆ ಬಂತೋ ಮುತ್ತು ಉಲ್ಟಾ ಹಪಡೆದಿದ್ದ. ನೀನು ನನಗೆ ಬೇಡ ಅಂತ ಡೈರೆಕ್ಟಾಗಿ ಹೇಳಿಬಿಟ್ಟಿದ್ದ. ಬಾಯ್ಫ್ರೆಂಡ್ ಕೈಕೊಟ್ಟ ಮೇಲೆ ಆ ಯುವತಿ ಹಳೆಯದನ್ನೆಲ್ಲಾ ಮರೆತು ಹೊಸ ಜೀವನ ಆರಂಭಿಸಲು ಶುರು ಮಾಡಿದ್ಲು. ಹೆತ್ತವರು ತೋರಿಸಿದ ಹುಡುಗನ ಜೊತೆ ಸಪ್ತಪದಿ ತುಳಿದ್ಲು. ಆದ್ರೆ ಇನ್ನೇನು ಮದುವೆ ಮಂಟಪದಿಂದ ಗಂಡನ ಮನೆಗೆ ಹೋಗಬೇಕು. ಅಷ್ಟರಲ್ಲೇ ಆ ಕಿರಾತಕ ಪ್ರೇಮಿ ಅಲ್ಲಿಗೆ ಎಂಟ್ರಿ ಕೊಟ್ಟಿದ್ದ. ಸೀದಾ ವರನ ಬಳಿ ಹೋಗಿ ತನ್ನ ಪ್ರೇಯಸಿಯ ಖಾಸಗಿ ಫೋಟೋಗಳನ್ನ ತೋರಿಸಿದ್ದ. ಅಷ್ಟೇ.. ಆ ಮದುವೆ ಅಲ್ಲೇ ಮುರಿದು ಬಿತ್ತು. ತಾಳಿ ಕಟ್ಟಿದವನು ಅವಳನ್ನ ಅಲ್ಲೇ ಬಿಟ್ಟು ಹೋಗಿದ್ದ. ಇನ್ನೂ ಹೊಸ ಜೀವನ ಆರಂಭಿಸುವ ಖುಷಿಯಲ್ಲಿದ್ದ ಯುವತಿಗೆ ದಿಕ್ಕೆ ತೋಚದಂತಾಗಿ ಸೀದಾ ಹೋಗಿದ್ದು ತನ್ನ ಜೀವನವನ್ನ ಬರ್ಬಾದ್ ಮಾಡಿದ ಪ್ರೇಮಿಯ ಮನೆಗೆ. ಪ್ರೀತಿಯಲ್ಲಿ ಮೋಸ ಹೋದರೂ.. ಅದನ್ನೆಲ್ಲಾ ಮರೆತು ಹೊಸ ಜೀವನದ ಕನಸು ಕಂಡಿದ್ದಳು ಆ ಯುವತಿ. ಆದ್ರೆ ಈ ಕಿರಾತಕ ಮದುವೆ ಮನೆಗೇ ನುಗ್ಗಿ ಮಾಡಿದ ಅವಾಂತರಕ್ಕೆ ಇವತ್ತು ಆ ಹೆಣ್ಣುಮಗಳು ಅಕ್ಷರಶಹ ಬೀದಿಗೆ ಬಿದ್ದಿದ್ದಾಳೆ.

ಇದನ್ನೂ ವೀಕ್ಷಿಸಿ: Darul Uloom Deoband: ಸದ್ದಿಲ್ಲದೇ ಶುರುವಾಗಿದ್ಯಾ ಘಜ್ವಾ-ಇ-ಹಿಂದ್-ಸಿದ್ಧತೆ ? ಫತ್ವಾ ಹೊರಡಿಸಿಲ್ಲ ಎನ್ನುತ್ತಿದೆ ದಿಯೋಬಂದ್..!

Related Video