ರಾಜ್ಯಸಭಾ ಚುನಾವಣಾ ಕಣಕ್ಕೆ 6 ಅಭ್ಯರ್ಥಿಗಳು; ಲೆಕ್ಕಾಚಾರ ಉಲ್ಟಾ ಮಾಡಿದ ಸಿದ್ದರಾಮಯ್ಯ!

ಕಾಂಗ್ರೆಸ್‌ಗೆ ಸಂಖ್ಯಾಬಲ ಇಲ್ಲದಿದ್ದರೂ ಸಹ ಮನ್ಸೂರ್ ಖಾನ್ ಅವರನ್ನ ಎರಡನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಇನ್ನು ಬಿಜೆಪಿ ಲೇಹರ್ ಸಿಂಗ್ ಅವರನ್ನ ಮೂರನೇ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಇವೆರಡು ಪಕ್ಷಗಳ ಮಧ್ಯೆ ಜೆಡಿಎಸ್‌ ಸಹ ಕುಪೇಂದ್ರ ರೆಡ್ಡಿ ಅವರನ್ನು ಸಹ ಕಣಕ್ಕಿಳಿಸಿದ್ದು, ತೀವ್ರ ಕುತೂಹಲ ಮೂಡಿಸಿದೆ. ರಾಜ್ಯಸಭಾ ಚುನಾವಣಾ ಕಣಕ್ಕೆ 6 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಲೆಕ್ಕಾಚಾರವನ್ನು  ಉಲ್ಟಾ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಮೇ.31): ರಾಜ್ಯಸಭಾ ಚುನಾವಣೆಯ ಮೇಲೆ ಮೂರು ಪಕ್ಷಗಳ ಕಣ್ಣು ಬಿದ್ದಿದೆ. 4 ಸ್ಥಾನಗಳಿಗೆ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸಜ್ಜಾಗಿದೆ. ಬಿಜೆಪಿ ಎರಡು ಸ್ಥಾನ ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಅನಾಯಾಸವಾಗಿ ಪಡೆಯಲಿದೆ. ಆದರೆ 4ನೇ ಸ್ಥಾನಕ್ಕೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸ್ಥಾನಗಳ ಕೊರತೆ ಎದುರಾಗಲಿದೆ.

ರಾಜ್ಯಸಭೆಯ 4ನೇ ಸ್ಥಾನಕ್ಕೆ 3 ಪಕ್ಷಗಳಿಂದ ಪೈಪೋಟಿ..!

Related Video