ಕುಂದಾನಗರಿಯಲ್ಲಿ ರಾಹುಲ್‌ ಕ್ಯಾಂಪೇನ್‌: ಲಿಂಗಾಯತ ನಾಯಕರಿಗೆ ಹೆಚ್ಚಿನ ಜವಬ್ದಾರಿ!

ಬೆಳಗಾವಿಯ ರಾಮದುರ್ಗದಲ್ಲಿ ರಾಹುಲ್‌ ಮತಬೇಟೆ
ಕಾಂಗ್ರೆಸ್ ಅಭ್ಯರ್ಥಿ ಪರ ರಾಹುಲ್‌ ಗಾಂಧಿ ಪ್ರಚಾರ
ಬಳಿಕ ಕಬ್ಬು ಬೆಳೆಗಾರರ ಜೊತೆ ರಾಹುಲ್‌ ಸಂವಾದ

Share this Video
  • FB
  • Linkdin
  • Whatsapp

ಬೆಳಗಾವಿ:ವಿಧಾನಸಭಾ ಚುನಾವಣೆ ಹಿನ್ನೆಲೆ ರಾಹುಲ್‌ ಗಾಂಧಿ ರಾಜ್ಯದಲ್ಲಿ ಪ್ರಚಾರವನ್ನು ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಬಳಿಕ ಇಂದು ಬೆಳಗಾವಿಯಲ್ಲಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಜಿಲ್ಲೆಯ ರಾಮದುರ್ಗದಲ್ಲಿ ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಎಂ. ಪಣ್ಣಣ ಪರ ಮತಬೇಟೆ ಮಾಡಲಿದ್ದಾರೆ. ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌, ಜಿಲ್ಲೆಯ 50 ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸೋಕೆ ರಣತಂತ್ರವನ್ನು ಮಾಡುತ್ತಿದೆ. 50ರಲ್ಲಿ 30ನ್ನು ಗೆಲ್ಲುವುದು ಕಾಂಗ್ರೆಸ್ ಗುರಿಯಾಗಿದೆ. ಬಳಿಕ ಕಬ್ಬು ಬೆಳೆಗಾರರ ಜೊತೆ ರಾಹುಲ್‌ ಗಾಂಧಿ ಸಂವಾದ ನಡೆಸಲಿದ್ದಾರೆ. ಅಲ್ಲದೇ ಲಿಂಗಾಯತ ನಾಯಕರ ಜೊತೆ ರಾಹುಲ್‌ ಗಾಂಧಿ ಸಭೆ ನಡೆಸಿ, ಅವರಿಗೆ ಹೆಚ್ಚಿನ ಜವಬ್ದಾರಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ವೀಕ್ಷಿಸಿ: ಕೂಡಲಸಂಗಮಕ್ಕೆ ರಾಹುಲ್ ಗಾಂಧಿ ಭೇಟಿ: ಲಿಂಗಾಯತ ಮತಸೆಳೆಯಲು ಕಾಂಗ್ರೆಸ್‌ ಮಾಸ್ಟರ್‌ ಪ್ಲ್ಯಾನ್‌

Related Video