ಕೂಡಲಸಂಗಮಕ್ಕೆ ರಾಹುಲ್ ಗಾಂಧಿ ಭೇಟಿ: ಲಿಂಗಾಯತ ಮತಸೆಳೆಯಲು ಕಾಂಗ್ರೆಸ್‌ ಮಾಸ್ಟರ್‌ ಪ್ಲ್ಯಾನ್‌

ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಹುಲ್‌ ಪ್ರಚಾರ
ಕೂಡಲಸಂಗಮಕ್ಕೆ ರಾಹುಲ್ ಗಾಂಧಿ ಭೇಟಿ
ಲಿಂಗಾಯತ ಅಸ್ತ್ರ ಪ್ರಯೋಗಿಸಲಿರುವ ರಾಹುಲ್‌ 

Share this Video
  • FB
  • Linkdin
  • Whatsapp

ಬಾಗಲಕೋಟೆ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇಂದು ರಾಜ್ಯಕ್ಕೆ ಪ್ರಚಾರಕ್ಕೆಂದು ಬರಲಿದ್ದಾರೆ. ಲಿಂಗಾಯತ ಮತಗಳ ಮೇಲೆ ಕಾಂಗ್ರೆಸ್‌ ಕಣ್ಣಿಟ್ಟಿದ್ದು, ಈ ಹಿನ್ನೆಲೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮತಬೇಟೆ ನಡೆಸಲು ಕೈ ಸಿದ್ಧವಾಗಿದೆ. ಇಂದು ಬಾಗಲಕೋಟೆ ಮತ್ತು ವಿಜಯಪುರದಲ್ಲಿ ನಡೆಯಲಿರುವ ಪ್ರಚಾರದಲ್ಲಿ ರಾಹುಲ್‌ ಗಾಂಧಿ ಭಾಗಿಯಾಗಲಿದ್ದಾರೆ. ಲಿಂಗಾಯತ ಮತಬ್ಯಾಂಕ್‌ನನ್ನು ಟಾರ್ಗೆಟ್‌ ಮಾಡುವುದು ರಾಹುಲ್‌ ಗಾಂಧಿ ಗುರಿಯಾಗಿದೆ. ಬಸವ ಜಯಂತಿ ಹಿನ್ನೆಲೆ ಬಸವಣ್ಣ ಐಕ್ಯವಾಗಿರುವ ಕೂಡಲಸಂಗಮ ಕ್ಷೇತ್ರದಲ್ಲಿ ಬಸವ ಉತ್ಸವ ಸಮಿತಿ ವತಿಯಿಂದ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಹುಲ್ ಗಾಂಧಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 

ಇದನ್ನೂ ವೀಕ್ಷಿಸಿ: ತುಘಲಕ್‌ ಲೇನ್‌ ಇನ್ಮುಂದೆ ರಾಹುಲ್‌ ಗಾಂಧಿ ವಿಳಾಸವಲ್ಲ, ಸರ್ಕಾರಿ ಬಂಗಲೆ ಖಾಲಿ ಮಾಡಿದ ಕಾಂಗ್ರೆಸ್‌ ನಾಯಕ!

Related Video