ಆತ ಕಾಂಗ್ರೆಸ್‌ ಕಾರ್ಯಕರ್ತನಾದ್ರೆ ಏಕೆ ಜೈಲಿಂದ ಬಿಡಿಸಿದ್ರಿ? ಯಾಕೆ ಆಸಕ್ತಿ? ಬಿಜೆಪಿಗೆ ತಿವಿದ ಮಹಾದೇವಪ್ಪ

ಸಿದ್ದರಾಮಯ್ಯ ಕಾರಿನ ಮೊಟ್ಟೆ ಎಸೆದವ ಕಾಂಗ್ರೆಸ್‌ ಕಾರ್ಯಕರ್ತ ಎಂದಾದ್ರೆ ಯಾಕೆ ಆತನನ್ನ ಜೈಲಿನಿಂದ ಬಿಡಿಸಿದ್ರಿ? ಕಾಂಗ್ರೆಸ್‌ ಕಾರ್ಯಕರ್ತನನ್ನು ಬಿಡಿಸಲು ಯಾಕೆ ಅಷ್ಟೊಂದು ಆಸಕ್ತಿ? ಎಂದು ಮಹಾದೇವಪ್ಪ ಅವರು  ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ
 

Share this Video
  • FB
  • Linkdin
  • Whatsapp

ಬೆಂಗಳೂರು, (ಆಗಸ್ಟ್.21): ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಆರೋಪಿ ಸಂಪತ್‌ ಯಾವ ಪಾರ್ಟಿ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ. ಸಂಪತ್ ಮೊದಲಿಗೆ ಕಾಂಗ್ರೆಸ್ ಇದ್ದು, ಇದೀಗ ಬಿಜೆಪಿಯಲ್ಲಿದ್ದಾನೆ. ಈ ಬಗ್ಗೆ ಸಾಕಷ್ಟು ಫೋಟೋಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಆದ್ರೆ, ಬಿಜೆಪಿಯುವರು ಆತ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳುತ್ತಿದ್ದಾರೆ.

ಬಿಜೆಪಿ- ಕಾಂಗ್ರೆಸ್‌ ನಡುವೆ ಜೋರಾಯ್ತು ಮೊಟ್ಟೆ ಪಾಲಿಟಿಕ್ಸ್; ಮಡಿಕೇರಿ ಚಲೋಗೆ ಕೈಪಡೆ ಸಿದ್ಧತೆ

ಇನ್ನು ಇದಕ್ಕೆ ಮಾಜಿ ಸಚಿವ ಎಚ್‌ಸಿ ಮಹಾದೇವಪ್ಪ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಕಾರಿನ ಮೊಟ್ಟೆ ಎಸೆದವ ಕಾಂಗ್ರೆಸ್‌ ಕಾರ್ಯಕರ್ತ ಎಂದಾದ್ರೆ ಯಾಕೆ ಆತನನ್ನ ಜೈಲಿನಿಂದ ಬಿಡಿಸಿದ್ರಿ? ಕಾಂಗ್ರೆಸ್‌ ಕಾರ್ಯಕರ್ತನನ್ನು ಬಿಡಿಸಲು ಯಾಕೆ ಅಷ್ಟೊಂದು ಆಸಕ್ತಿ? ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ

Related Video