ಬಿಜೆಪಿ- ಕಾಂಗ್ರೆಸ್‌ ನಡುವೆ ಜೋರಾಯ್ತು ಮೊಟ್ಟೆ ಪಾಲಿಟಿಕ್ಸ್; ಮಡಿಕೇರಿ ಚಲೋಗೆ ಕೈಪಡೆ ಸಿದ್ಧತೆ

ಬಿಜೆಪಿ- ಕಾಂಗ್ರೆಸ್‌ ನಡುವೆ  ಮೊಟ್ಟೆ ಪಾಲಿಟಿಕ್ಸ್ ಜೋರಾಗಿದೆ. ರಾಜಕೀಯ ಕಾವು ಪಡೆಯಲು ಉಭಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಬಳ್ಳಾರಿ ಪಾದಯಾತ್ರೆ ಮಾದರಿಯಲ್ಲಿ ಮಡಿಕೇರಿ ಚಲೋ ಎಂಬ ಮಹಾನಡಿಗೆಗೆ ಕಾಂಗ್ರೆಸ್‌ ಸಿದ್ಧತೆ ನಡೆಸಿದೆ

First Published Aug 21, 2022, 3:10 PM IST | Last Updated Aug 21, 2022, 3:10 PM IST

ಬೆಂಗಳೂರು, (ಆಗಸ್ಟ್.21): ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತ ಮೊಟ್ಟೆ ಎಸೆದಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಮೊಟ್ಟೆ ಎಸೆದಿರುವ ವಿರುದ್ಧ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳು ಮಡಿಕೇರಿ ಚಲೋಗೆ ಕರೆ ನೀಡಿದ್ದಾರೆ.

ಮೊಟ್ಟೆ ಗಲಾಟೆ: 26ರಂದು ಕಾಂಗ್ರೆಸ್ ಮಡಿಕೇರಿ ಚಲೋಗೆ ಬಿಜೆಪಿ ಕೌಂಟರ್

ಇದಕ್ಕೆ ಬಿಜೆಪಿ ಸಹ ಟಕ್ಕರ್ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ  ಬಿಜೆಪಿ- ಕಾಂಗ್ರೆಸ್‌ ನಡುವೆ  ಮೊಟ್ಟೆ ಪಾಲಿಟಿಕ್ಸ್ ಜೋರಾಗಿದೆ. ರಾಜಕೀಯ ಕಾವು ಪಡೆಯಲು ಉಭಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಬಳ್ಳಾರಿ ಪಾದಯಾತ್ರೆ ಮಾದರಿಯಲ್ಲಿ ಮಡಿಕೇರಿ ಚಲೋ ಎಂಬ ಮಹಾನಡಿಗೆಗೆ ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.