
Video: ಕೊನೆಗೂ ತಿಹಾರ್ ಜೈಲಿನಿಂದ ಹೊರಬಂದ ಡಿಕೆಶಿಯ ಫಸ್ಟ್ ರಿಯಾಕ್ಷನ್
ತಿಹಾರ್ ಜೈಲಿನಿಂದ ಹೊರಬಂದ ಡಿಕೆ ಶಿವಕುಮಾರ್ ಅವರ ಮೊದಲ ಪ್ರತಿಕ್ರಿಯೆಯನ್ನು ಅವರ ಬಾಯಿಂದಲೇ ಕೇಳಿ.
ನವದೆಹಲಿ, [ಅ.23]: ಅಕ್ರಮ ಹಣ ವರ್ಗಾವಣೆ ಅರೋಪದಲ್ಲಿ ಸುಮಾರು 48 ದಿನ ಬಳಿಕ ತಿಹಾರ್ ಜೈಲ್ ನಿಂದ ಡಿ.ಕೆ.ಶಿವಕುಮಾರ್ ಹೊರಬಂದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಜಾಮೀನು ಆದೇಶ ಪರಿಶೀಲನೆ ನಡೆಸಿದ ತಿಹಾರ್ ಜೈಲು ಅಧಿಕಾರಿಗಳು ಬಿಡುಗಡೆ ಪ್ರಕ್ರಿಯೆ ನಡೆಸಿ ಬುಧವಾರ ರಾತ್ರಿ 9.30ಕ್ಕೆ ಅವರನ್ನು ಬಿಡುಗಡೆ ಮಾಡಿದರು.
ಸಹೋದರ ಸಂಸದ ಡಿ.ಕೆ.ಸುರೇಶ್ ಜೈಲಿನ ಬಾಗಿಲಲ್ಲೇ ನಿಂತು ಅಣ್ಣನನ್ನು ಹೊರಗಡೆಗೆ ಬರಮಾಡಿಕೊಂಡರು. ಇವರ ಜೊತೆ ಕಾಂಗ್ರೆಸ್ ನಾಯಕರು ಇದ್ದರು. ಇದೇ ವೇಳೆ ಡಿಕೆಶಿ ಏನೆಲ್ಲಾ ಮಾತನಾಡಿದರು ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.