ಗ್ಯಾರಂಟಿ “ತುತ್ತು”, ಮಿಷನ್ 20 “ಮತ್ತು”, ಯಾರಿಗೆ ಆಪತ್ತು..?: ಲೋಕಯುದ್ಧದಲ್ಲಿ ಗ್ಯಾರಂಟಿಗಳೇ ಕಾಂಗ್ರೆಸ್ ಟ್ರಂಪ್‌ಕಾರ್ಡ್..!

2019ರ ಲೋಕಸಭಾ ಚುನಾವಣೆಯಲ್ಲಿ ದಕ್ಕಿದ್ದು ಸಿಂಗಲ್ ಸೀಟ್..!
2024ರ ಮಹಾಸಂಗ್ರಾಮದಲ್ಲಿ ಮಿಷನ್ 20 ಗುರಿಯೇ ಕೈ ಟಾರ್ಗೆಟ್..!
ಅನ್ನಭಾಗ್ಯ.. ಗೃಹಜ್ಯೋತಿ.. ಶಕ್ತಿ.. "ಕೈ"ಗೆ ಸಿಕ್ಕಿತು ಯುದ್ಧಶಕ್ತಿ..!

Share this Video
  • FB
  • Linkdin
  • Whatsapp

ಕರ್ನಾಟಕ ಕುರುಕ್ಷೇತ್ರದಲ್ಲಿ 135 ಸೀಟುಗಳ ಪ್ರಚಂಡ ವಿಜಯ. ಮಹಾಭಾರತ ಮಹಾಯುದ್ಧದಲ್ಲಿ ಮಿಷನ್ 20 ಟಾರ್ಗೆಟ್. ಅಶ್ವಮೇಧಕ್ಕೆ ರೆಡಿಯಾಗ್ತಿರೋ ಕಾಂಗ್ರೆಸ್ ಸೇನಾನಿಗಳ ಬತ್ತಳಿಕೆಯಲ್ಲಿ ಗ್ಯಾರಂಟಿ ಅಸ್ತ್ರಗಳದ್ದೇ ಸದ್ದು. ಗ್ಯಾರಂಟಿ ತುತ್ತನ್ನೇ ಮುಂದಿಟ್ಟುಕೊಂಡು, ಮಿಷನ್ ಟ್ವೆಂಟಿಯ ಮತ್ತಿನಲ್ಲಿ ಬಿಜೆಪಿಗೆ ಆಪತ್ತು ತರಲು ಕೈ ಪಾಳೆಯ ಪ್ಲ್ಯಾನ್‌ ಮಾಡ್ತಿದೆ. ಇಡೀ ದೇಶವೇ ಕುತೂಹಲದಿಂದ ಕಾಯ್ತಾ ಇರೋ, ಚಾತಕ ಪಕ್ಷಿಗಳಂತೆ ಎದುರು ನೋಡ್ತಾ ಇರೋ ಮಹಾಭಾರತ ಯುದ್ಧ. ಅದು ದೇಶದ ಭವಿಷ್ಯವನ್ನ ಬರೆಯಲಿರೋ ಮಹಾಯುದ್ಧ, ಮೋದಿ ಅನ್ನೋ ಮಹಾವೀರನಿಗೆ ಅಗ್ನಿಪರೀಕ್ಷೆಯಾಗಿರೋ ಮಹಾಸಂಗ್ರಾಮ. ಅಷ್ಟೇ ಅಲ್ಲ, ದಶದಿಕ್ಕುಗಳಲ್ಲೂ ದಶಾಶ್ವಮೇಧ ಶುರು ಮಾಡಿ ಮೋದಿಗೆ ಸವಾಲೆಸೆದು ನಿಂತಿರೋರ ಸತ್ವಪರೀಕ್ಷೆಗೆ ಸಾಕ್ಷಿಯಾಗಲಿರೋ ಮಹಾಕಾಳಗ. ಆ ಮಹಾಭಾರತ ಯುದ್ಧಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ರಣಕಹಳೆ ಮೊಳಗಿಯೇ ಬಿಟ್ಟಿದೆ.

ಇದನ್ನೂ ವೀಕ್ಷಿಸಿ: 250 ಎಕರೆ ಭೂಮಿ ಖರೀದಿಸಿರುವ ಅಜಿತ್‌ ರೈ : ಅಂಡರ್‌ವಲ್ಡ್‌ ಕ್ರಿಮಿ ಮಾನ್ವಿತ್‌ ರೈ ಜೊತೆ ನಂಟು ?

Related Video