250 ಎಕರೆ ಭೂಮಿ ಖರೀದಿಸಿರುವ ಅಜಿತ್‌ ರೈ : ಅಂಡರ್‌ವಲ್ಡ್‌ ಕ್ರಿಮಿ ಮಾನ್ವಿತ್‌ ರೈ ಜೊತೆ ನಂಟು ?

ಅಜಿತ್‌ ರೈ ಭೂಮಿ ಖರೀದಿಸುವಾಗ ಮನ್ವಿತ್‌ ರೈ ಹೆಸರು ಹೇಳಿ ರೈತರನ್ನು ಬೆದರಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ಕೆ.ಆರ್‌.ಪುರ ತಹಶೀಲ್ದಾರ್‌ ಅಜಿತ್ ರೈ ಮತ್ತೊಂದು ಲೋಕ ಅನಾವರಣಗೊಂಡಿದೆ. ಆತ ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿರುವ ಬಗ್ಗೆ ಲೋಕಾಯುಕ್ತಕ್ಕೆ ಮಾಹಿತಿ ಸಿಕ್ಕಿದೆ. ದೇವನಹಳ್ಳಿ, ದೊಡ್ಡಬಳ್ಳಾಪುರ ಬಳಿ 250 ಎಕರೆ ಆಸ್ತಿ ಖರೀದಿ ಮಾಡಿದ್ದಾನೆ ಎಂದು ಮಾಹಿತಿ ಲಭಿಸಿದೆ. ಲೋಕಾಯುಕ್ತ ದಾಳಿ ವೇಳೆ ಐಷಾರಾಮಿ ಕಾರುಗಳು, ಕಂತೆ ಕಂತೆ ನೋಟು, ಚಿನ್ನಾಭರಣಗಳು ದೊರೆತಿದ್ದವು. ಅಲ್ಲದೇ ಭೂಗತ ಲೋಕದ ಪಾತಕಿ ಮಾನ್ವಿತ್‌ ರೈ ಜೊತೆ ಅಜಿತ್‌ ರೈಗೆ ಲಿಂಕ್ ಇದೆ ಎಂದು ತಿಳಿದುಬಂದಿದೆ. ಮನ್ವಿತ್ ರೈ ಜೊತೆ ಪಾರ್ಟನರ್‌ ಶಿಪ್‌ನಲ್ಲಿ ಅಜಿತ್ ರೈ ಭೂಮಿ ಖರೀದಿಸಿದ್ದ ಎಂಬ ಆರೋಪ ಕೇಳಿಬಂದಿದೆ. ಗೌರವ್‌ ಶೆಟ್ಟಿ ಹೆಸರಿನಲ್ಲಿ 150 ಎಕರೆ, ಅಜಿತ್‌ ರೈ ಹೆಸರಿನಲ್ಲಿ 100 ಎಕರೆ ಭೂಮಿ ಖರೀದಿಸಲಾಗಿತ್ತು. ರೈತರಿಗೆ ಮನ್ವಿತ್‌ ರೈ ಹೆಸರು ಹೇಳಿ ಅವರನ್ನು ಹೆದರಿಸಿ ಭೂಮಿ ಖರೀದಿಸಲಾಗಿತ್ತು ಎಂದು ತಿಳಿದುಬಂದಿದೆ.

ಇದನ್ನೂ ವೀಕ್ಷಿಸಿ: ಕೈಕೊಟ್ಟ ಮುಂಗಾರು..ಮದಗದ ಕೆರೆ ಖಾಲಿ..ಖಾಲಿ : ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಆತಂಕ

Related Video