ತಿಂಗಳಿಗೆ 5 kg ಅಕ್ಕಿ+170 ರೂ.ಸಿದ್ದು ಹೊಸ ಪ್ಲ್ಯಾನ್‌: ಅನ್ನಭಾಗ್ಯ ಫಲಾನುಭವಿಗಳಿಗೆ ಅಕ್ಕಿ+ ದುಡ್ಡು..!

ಜುಲೈ 1ರ ಮುಹೂರ್ತದಲ್ಲೇ ಕೈಸೇರಲಿದೆ 5 kg ಅಕ್ಕಿ+₹170
"ಅನ್ನಭಾಗ್ಯ ಗ್ಯಾರಂಟಿ" ಶಪಥ ಈಡೇರಿಸಲು ಹರಸಾಹಸ
ಸಿದ್ದು ಸರ್ಕಾರದ ಹೊಸ ಗೇಮ್ ಪ್ಲಾನ್‌ಗೆ ಕೇಸರಿ ಕೆಂಡ..! 

First Published Jun 29, 2023, 10:59 AM IST | Last Updated Jun 29, 2023, 10:59 AM IST

ತಿಂಗಳಿಗೆ 10 ಕೆಜಿ ಅಕ್ಕಿ ಉಚಿತ ಅನ್ನೋದು ಕಾಂಗ್ರೆಸ್'ನ ಐದು ಗ್ಯಾರಂಟಿಗಳ ಪೈಕಿ ಒಂದು ಗ್ಯಾರಂಟಿ. ಈ ಪೈಕಿ 5 ಕೆ.ಜಿ ಅಕ್ಕಿ ಕೇಂದ್ರ ಸರ್ಕಾರದಿಂದ್ಲೇ ಬರತ್ತೆ. ಹೀಗಾಗಿ ರಾಜ್ಯ ಸರ್ಕಾರ ಕೊಡಬೇಕಿರೋದು ಹೆಚ್ಚುವರಿ 5 ಕೆ.ಜಿ ಅಕ್ಕಿ. ಹಿಂದೆಲ್ಲಾ ರಾಜ್ಯ ಸರ್ಕಾರ ಅಕ್ಕಿಯನ್ನು ಭಾರತೀಯ ಆಹಾರ ನಿಗಮ, ಅಂದ್ರೆ FCIನಿಂದ ಅವ್ರೇ ನಿಗದಿ ಪಡಿಸಿದ ಬೆಲೆಯಲ್ಲಿ ಖರೀದಿ ಮಾಡ್ತಾ ಇತ್ತು. ಇದ್ರಿಂದ ಈ ಬಾರಿಯೂ ಸಹಜವಾಯಿಗೇ FCI ಅಕ್ಕಿ ಕೊಡಲಿದೆ ಅಂತಾನೇ ಸಿದ್ದರಾಮಯ್ಯ ನಂಬಿದ್ರು. FCIಗೆ ಪತ್ರ ಬರೆದು ಇದನ್ನು ಖಚಿತ ಪಡಿಸಿಕೊಂಡಿದ್ರು. ತಿಂಗಳಿಗೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಸರಬರಾಜು ಮಾಡೋದಕ್ಕೆ FCI ಪತ್ರದ ಮುಖೇನ ತಿಳಿಸಿತ್ತು ಅಂದ್ರೆ ಸಿಎಂ ಸಿದ್ದರಾಮಯ್ಯ ಹೇಳ್ತಾರೆ. ಆದ್ರೆ ಇದ್ದಕ್ಕಿದ್ದಂತೆ ಅಕ್ಕಿ ಕೊಡಲು ಸಾಧ್ಯವಿಲ್ಲ ಅಂತ ಹೇಳಿದ FCI ಕೈ ಸರ್ಕಾರಕ್ಕೆ ಶಾಕ್ ಕೊಟ್ಟು ಬಿಡ್ತು. ಇದ್ರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವ್ರನ್ನು ಭೇಟಿ ಮಾಡಿ ಅಕ್ಕಿ ನೀಡುವಂತೆ ಮನವಿ ಮಾಡಿದ್ರು. ಇದೀಗ ಸರ್ಕಾರ 5 ಕೆಜಿ ಅಕ್ಕಿಗೆ ಹಣ ನೀಡಲು ನಿರ್ಧರಿಸಿದೆ. ಒಂದು ಕೆ.ಜಿ ಅಕ್ಕಿಗೆ ಸರ್ಕಾರ ನಿಗದಿ ಪಡಿಸಿರುವ ಬೆಲೆ 34 ರೂಪಾಯಿ. ಅಂದ್ರೆ 5 ಕೆ.ಜಿ ಅಕ್ಕಿಗೆ 170 ರೂಪಾಯಿ.ಈ ಸ್ಕೀಮ್'ನಿಂದಾಗಿ ಸರ್ಕಾರದ ಬೊಕ್ಕಸಕ್ಕೆ ತಿಂಗಳಿಗೆ 750ರಿಂದ 800 ಕೋಟಿ ರೂಪಾಯಿ ಹೊರೆ ಆಗಲಿದೆ.

ಇದನ್ನೂ ವೀಕ್ಷಿಸಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಹೆಚ್ಚಾತ್ತು ವಿರೋಧ?: ಬಿಜೆಪಿ ಈ ನಡೆಗೆ ಆಪ್‌ ಬೆಂಬಲ !

Video Top Stories