Asianet Suvarna News Asianet Suvarna News

ಹಿಂದಿನ ಸರ್ಕಾರಗಳು ಕೈಹಾಕದ ಸಾಹಸಕ್ಕೆ ಕೈಹಾಕುತ್ತಾ ಕಾಂಗ್ರೆಸ್‌ ಸರ್ಕಾರ? ಸಂಚಲನ ಹುಟ್ಟುಹಾಕಿದ ಸಿಎಂ ಟ್ವೀಟ್!

ಹಿಂದಿನ ಸರ್ಕಾರ ಮಾಡಿದ್ದ ಮೀಸಲಾತಿ ಮಹಾ ಹುತ್ತಕ್ಕೆ ಸರ್ಕಾರ ಕೈಹಾಕುತ್ತಾ ಅನ್ನೋ ಪ್ರಶ್ನೆ ಕಾಡ್ತಿದೆ.

ರಾಜ್ಯ ರಾಜಕೀಯದಲ್ಲಿ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಸಂಚಲನ ಮುಡಿಸಿದೆ. ಕರ್ನಾಟಕ ಮತ್ತೊಂದು ಜಾತಿ ರಾಜಕಾರಣಕ್ಕೆ ಕಾರಣವಾಗುತ್ತಾ ಅಂತ ಅನುಮಾನ ಮೂಡಿಸುತ್ತಿದೆ. ಸಾಮಾಜಿಕ ನ್ಯಾಯದ ಹೆಸರಲ್ಲಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್‌ ಮಾಡಿದ್ದು, ಹಿಂದಿನ ಸರ್ಕಾರ ಮಾಡಿದ್ದ ಮೀಸಲಾತಿ ಮಹಾ ಹುತ್ತಕ್ಕೆ ಸರ್ಕಾರ ಕೈಹಾಕುತ್ತಾ ಅನ್ನೋ ಪ್ರಶ್ನೆ ಕಾಡ್ತಿದೆ. ಹಿಂದುಳಿದ ವರ್ಗಗಳ, ಒಳ ಮೀಸಲಾತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಪ್ರಸ್ತಾಪ ಮಾಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಸಮೀಕ್ಷೆ ಬಹಿರಂಗವಾಗುತ್ತಾ ಎಂದೂ ಹೇಳಲಾಗ್ತಿದೆ.