ವರುಣಾದಲ್ಲಿ ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ: ಬೂತ್‌ ಬಳಿ ಸೋಮಣ್ಣ ತೆರಳುವುದಕ್ಕೆ ವಿರೋಧ

ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಹೈಡ್ರಾಮಾ
ಬೂತ್‌ ವೀಕ್ಷಣೆಗೆ ತೆರಳಿದ್ದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ
ವೀಕ್ಷಣೆಗೆ ತೆರಳದಂತೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಅಡ್ಡಿ

Share this Video
  • FB
  • Linkdin
  • Whatsapp

ಮೈಸೂರು: ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ ನಡೆದಿದೆ. ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಬೂತ್‌ ವೀಕ್ಷಣೆಗೆ ತೆರಳಿದ್ದರು. ಆದ್ರೆ ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಯನ್ನುಂಟು ಮಾಡಿದ್ದಾರೆ. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಪರಸ್ಪರ ಘೋಷಣೆಯನ್ನು ಕೂಗಿದ್ದಾರೆ. ಈ ಕ್ಷೇತ್ರದಲ್ಲಿ ಮತ ಪ್ರಚಾರ ಮಾಡುವಾಗಲೂ ಗಲಾಟೆ ನಡೆದಿತ್ತು. ಕಾಂಗ್ರೆಸ್‌ ಕಾರ್ಯಕರ್ತರು ಅಡ್ಡಿ ಪಡಿಸುತ್ತಿದ್ದಂತೆ, ವಿ. ಸೋಮಣ್ಣ ಪೊಲೀಸ್‌ ವರಿಷ್ಠಾಧಿಕಾರಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾರೆ. ಬಳಿಕ ಅಲ್ಲೇ ಇದ್ದ ಪ್ಯಾರಾ ಮಿಲಿಟರಿ ಫೋರ್ಸ್‌ ಜನರನ್ನು ಅಲ್ಲಿಂದ ಚದುರಿಸಿದರು. ನಂತರ ಸೋಮಣ್ಣ ಬೂತ್‌ ವೀಕ್ಷಣೆ ಮಾಡಿಕೊಂಡು ಬಂದರು.

ಇದನ್ನೂ ವೀಕ್ಷಿಸಿ: Karnataka election:ಮತ ಚಲಾಯಿಸಿದ ಹೆಚ್‌.ಡಿ. ದೇವೇಗೌಡ ದಂಪತಿ

Related Video