Asianet Suvarna News Asianet Suvarna News

News Hour ಪಂಚರಾಜ್ಯದ ಮಹಾತೀರ್ಪು, ಉತ್ತರಪ್ರದೇಶದಲ್ಲಿ ಬಿಜೆಪಿ ಬಲಿಷ್ಠ, ಪಂಜಾಬ್ ನಲ್ಲಿ ಕಾಂಗ್ರೆಸ್ ಧೂಳಿಪಟ!

ಪಂಜಾಬ್ ನಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ

ಗೋವಾ, ಮಣಿಪುರದಲ್ಲಿ ಬಿಜೆಪಿ ಮ್ಯಾಜಿಕ್

ಉತ್ತಾರಾಖಂಡದಲ್ಲೂ ಗದ್ದುಗೆ ಉಳಿಸಿಕೊಂಡ ಬಿಜೆಪಿ

ಉತ್ತರ ಪ್ರದೇಶದಲ್ಲಿ ಕ್ಲಿಕ್ ಆದ ಮೋದಿ-ಯೋಗಿ ವರ್ಚಸ್ಸು
 

First Published Mar 11, 2022, 12:25 AM IST | Last Updated Mar 11, 2022, 12:25 AM IST

ಬೆಂಗಳೂರು ( ಮಾ. 10): ದೇಶದ ಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ ಚುನಾವಣೆಯಲ್ಲಿ (Five State Election) ಭಾರತೀಯ ಜನತಾ ಪಕ್ಷ (BJP) ಎಕ್ಸಿಟ್ ಪೋಲ್ ಗಳ (Exit Poll)ಸಮೀಕ್ಷೆಯಂತೆ ನಾಲ್ಕು ರಾಜ್ಯಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಪಂಜಾಬ್ ನಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ದೇಶದ ರಾಜಕಾರಣದಲ್ಲಿ ಹೊಸ ನೀರನ್ನು ತಂದಿರುವ ಆಮ್ ಆದ್ಮಿ ಪಾರ್ಟಿಯ (Aam Admi Party) ಮುಂದೆ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕಚ್ಚಿದೆ.

ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿ (Narendra Modi ) ಹಾಗೂ ಯೋಗಿ ಆದಿತ್ಯನಾಥ್ (Yogi Adityanath) ಅವರ ವರ್ಚಸ್ಸು ಸಂಪೂರ್ಣವಾಗಿ ಕ್ಲಿಕ್ ಆಗಿದೆ. ಇದಕ್ಕೆ ಮುಖ್ಯ ಕಾರಣವಾಗಿರೋದು ಕಾನೂನು ಸುವ್ಯವಸ್ಥೆ. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ತೋರಿದ್ದ ಬದ್ಧತೆಯೇ ನೇರವಾಗಿ ಗೆಲುವಿಗೆ ಕಾರಣವಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶ ಕಂಡಿದ್ದರೆ, ಕಾಂಗ್ರೆಸ್ ಅಧಿಕಾರದಲ್ಲಿದ್ದ ಪಂಜಾಬ್, ಆಪ್ ತೆಕ್ಕೆಗೆ ಜಾರಿದೆ. ಕಾಂಗ್ರೆಸ್ ನ ಘಟಾನುಘಟಿ ನಾಯಕರು ಚುನಾವಣೆಯಲ್ಲಿ ಸೋಲು ಕಂಡಿದ್ದು ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

Election Result 2022 ಆಪ್ ಗೆಲುವು ಸಾಧಿಸುತ್ತಿದ್ದಂತೆ ಟ್ವಿಟರ್, ಫೇಸ್ ಬುಕ್ ನಲ್ಲಿ ಝೆಲೆನ್ಸ್ಕಿ ಟ್ರೆಂಡಿಂಗ್!
ಸಣ್ಣ ರಾಜ್ಯವಾಗಿದ್ದರೂ, ಚುನಾವಣೆಯ ನಿಟ್ಟಿನಲ್ಲಿ ಗಮನಸೆಳೆದಿದ್ದ ಗೋವಾ ಹಾಗೂ ಮಣಿಪುರದಲ್ಲಿ, ಆಡಳಿತವಿರೋಧಿ ಅಲೆಯ ಹೊರತಾಗಿಯೂ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

Video Top Stories