Election Result 2022 ಆಪ್ ಗೆಲುವು ಸಾಧಿಸುತ್ತಿದ್ದಂತೆ ಟ್ವಿಟರ್, ಫೇಸ್ ಬುಕ್ ನಲ್ಲಿ ಝೆಲೆನ್ಸ್ಕಿ ಟ್ರೆಂಡಿಂಗ್!

ಪಂಜಾಬ್ ನಲ್ಲಿ ಭಗವಂತ್ ಮಾನ್ ಭರ್ಜರಿ ಗೆಲುವು

ಇದರ ಬೆನ್ನಲ್ಲೇ ಟ್ವಿಟರ್, ಫೇಸ್ ಬುಕ್ ನಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಟ್ರೆಂಡಿಂಗ್

ಇಂಡಿಯನ್ ಝೆಲೆನ್ಸ್ಕಿ ಪಂಜಾಬ್ ಝೆಲೆನ್ಸ್ಕಿ ಎಂದು ಭಗವಂತ್ ಮಾನ್ ರನ್ನು ಕರೆದ ಟ್ವೀಪಲ್ಸ್

ukraine president zelenskyy start trending as soon as the aam aadmi party won in punjab in 2022 assembly election san

ನವದೆಹಲಿ (ಮಾ.10): ಪಂಜಾಬ್ ಚುನಾವಣಾ ಫಲಿತಾಂಶ (Punjab Election Result) ಪ್ರಕಟವಾಗುತ್ತಿದ್ದಂತೆ ಆಮ್ ಆದ್ಮಿ ಪಕ್ಷದ (Aam Admi Party) ಭಗವಂತ್ ಮಾನ್ (Bhagwant Mann) ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಪಂಜಾಬ್ ಚುನಾವಣೆಗಳ ಆರಂಭಿಕ ಸೂಚನೆಯಲ್ಲಿಯೇ ಆಪ್ ಪರವಾದ ಒಲವು ತೋರಲು ಆರಂಭಿಸಿದಾಗ, ಪಂಜಾಬ್ ಚುನಾವಣೆಯೊಂದಿಗೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ (Volodymyr Zelensky) ಕೂಡ ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಟ್ರೆಂಡಿಂಗ್ ಎನಿಸಿದ್ದರು.

ನಿಜವಾದ ವಿಚಾರವೇನೆಂದರೆ, ಈ ಹಂತದಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಭಗವಂತ್ ಮಾನ್ ಅವರನ್ನು ಉಕ್ರೇನ್ (Ukraine) ದೇಶದ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಹೋಲಿಕೆ ಮಾಡಲು ಆರಂಭಿಸಿದ್ದರು. ಯಾಕೆಂದರೆ, ವೊಲೋಡಿಮಿರ್ ಝೆಲೆನ್ಸ್ಕಿ ಕೂಡ ಒಂದು ಕಾಲದಲ್ಲಿ ಭಗವಂತ್ ಮಾನ್ ಅವರಂತೆ ಹಾಸ್ಯನಟರಾಗಿದ್ದರು. ಬಳಿಕ ರಾಜಕೀಯ (Politics) ಪ್ರವೇಶಿಸಿ ದೇಶದ ಅಧ್ಯಕ್ಷ ಪದವಿಗೇರಿದ್ದರು.

ಝೆಲೆನ್ಸ್ಕಿ ಉಕ್ರೇನ್‌ನ ಪ್ರಸಿದ್ಧ ಹಾಸ್ಯ ಕಾರ್ಯಕ್ರಮ ಕೆವಿಎನ್‌ನಲ್ಲಿ ಪ್ರದರ್ಶನ ನೀಡುತ್ತಿದ್ದರು. 2003ರ ವರೆಗೂ ಈ ಕಾರ್ಯಕ್ರಮದಲ್ಲಿ ಅವರಿದ್ದರು. ಟಿವಿಯ ಹೊರತಾಗಿ ಝೆಲೆನ್ಸ್ಕಿ , ಹಾಸ್ಯ ಚಿತ್ರಗಳಾದ 8 ಫಸ್ಟ್ ಡೇಟ್ಸ್ (2012) ಮತ್ತು 8 ನ್ಯೂ ಡೇಟ್ಸ್ (2015) ಅಲ್ಲಿಯೂ ಕೆಲಸ ಮಾಡಿದ್ದರು.


ಇನ್ನೊಂದೆಡೆ ಭಗವಂತ್ ಮಾನ್ ಬಗ್ಗೆ ಮಾತನಾಡುವುದಾದರೆ, ರಾಜಕೀಯಕ್ಕೆ ಸೇರುವ ಮುನ್ನ ಪಂಜಾಬ್ ನ ಟಿವಿ ಚಾನೆಲ್ ಗಳು ಹಾಗೂ ರಾಷ್ಟ್ರೀಯ ಚಾನೆಲ್ ಗಳಲ್ಲಿ ಹಾಸ್ಯ ಕಾರ್ಯಕ್ರಮ ನೀಡಿದ್ದರು. ಅದರಲ್ಲೂ ಜುಗ್ನು ಮಸ್ತ್ ಮಸ್ತ್ ಶೋ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು.


ಸಚಿನ್ ಪಟೇಲ್ ಎನ್ನುವ ವ್ಯಕ್ತಿ ಈ ಕುರಿತಾಗಿ ಪೋಸ್ಟ್ ಒಂದನ್ನು ಪ್ರಕಟಿಸಿದ್ದರು, ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಹಾಗೂ ಭಗವಂತ್ ಮಾನ್ ಇಬ್ಬರೂ ಹಾಸ್ಯದ ಮೂಲಕ ಆರಂಭಿಸಿದ್ದರು. ಈಗ ಪ್ರದರ್ಶನ ನೀಡುವ ಸಮಯ ಎಂದು ಬರೆದಿದ್ದಾರೆ.

ಭಗವಂತ್ ಮಾನ್ ಅವರನ್ನು ಆಯ್ಕೆ ಮಾಡಿದ್ದು ಹೇಗೆ?
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಭಗವಂತ್ ಮಾನ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತು. ಆಪ್ ನ 'ಜನತಾ ಚುನೇಗಿ ಅಪ್ನಾ ಸಿಎಂ' ಕಾರ್ಯಕ್ರಮದ ಮೂಲಕ ಮಾನ್ ಅವರನ್ನು ಆಯ್ಕೆ ಮಾಡಿರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಅವರಿಗೆ ದೂರವಾಣಿ ಕರೆ, ಎಸ್‌ಎಂಎಸ್ ಮತ್ತು ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಮತ ಹಾಕುವ ಅವಕಾಶ ನೀಡಲಾಗಿತ್ತು.

ಜನವರಿ 18 ರಂದು ಮಾನ್ ಅವರನ್ನು ಪಂಜಾಬ್ ಚುನಾವಣೆಗೆ ಆಪ್ ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಅಂದು ಒಟ್ಟಾರೆ ಬಿದ್ದ ಮತಗಳ ಪೈಕಿ ಶೇ.93ರಷ್ಟು ಮಂದಿ ಮಾನ್ ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ಇಚ್ಛಿಸಿರುವುದಾಗಿ ತಿಳಿಸಿದ್ದರು. ಮಾನ್ ಅವರು 2014 ರಿಂದ ಸತತವಾಗಿ ಎರಡು ಅವಧಿಗೆ ಸಂಗ್ರೂರ್‌ನ ಪಂಜಾಬ್ ಲೋಕಸಭಾ ಸ್ಥಾನಕ್ಕೆ ಚುನಾಯಿತರಾಗಿದ್ದಾರೆ.

ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (Aam Admni Party) ಕ್ಲೀನ್ ಸ್ವೀಪ್ ಮಾಡಿದ ಬೆನ್ನಲ್ಲಿಯೇ ಧುರಿಯಲ್ಲಿ ವಿಜಯೋತ್ಸವ ಭಾಷಣ ಮಾಡಿದ ಭಗವಂತ್ ಮಾನ್, ಪ್ರಮಾಣವಚನ ಸಮಾರಂಭವು ಪಂಜಾಬ್ ನ ರಾಜಭವನದ ಬದಲಾಗಿ  ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ನವಾನ್‌ಶಹರ್ (Nawanshahr ) ಜಿಲ್ಲೆಯ ಖಟ್ಕರ್‌ಕಲನ್‌ನಲ್ಲಿ (Khatkarkalan ) ನಡೆಯಲಿದೆ ಎಂದು ಘೋಷಣೆ ಮಾಡಿದರು. ಭಗವಂತ್ ಮಾನ್ ಗುರುವಾರ ಈ ಘೋಷಣೆ ಮಾಡಿದ ಬೆನ್ನಲ್ಲಿಯೇ ಪ್ರೇಕ್ಷಕರಿಂದ ಹರ್ಷೋದ್ಘಾರ ಮಾಡಿದರು. ಅದರೊಂದಿಗೆ ಎದುರಾಳಿ ಕಾಂಗ್ರೆಸ್ ಪಕ್ಷಕ್ಕೆ ತಾವು ಭಯೋತ್ಪಾದಕ ಸ್ನೇಹಿ ಪಕ್ಷವಲ್ಲ ಎನ್ನುವ ಉತ್ತರವನ್ನು ಮಾರ್ಮಿಕವಾಗಿ ನೀಡಿದ್ದಾರೆ. ಇದೇ ವೇಳೆ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ವಾಡಿಕೆಯಂತೆ ಮುಖ್ಯಮಂತ್ರಿಗಳ ಫೋಟೋ ಇರುವುದಿಲ್ಲ ಎಂದು ಘೋಷಿಸಿದರು.

 

Latest Videos
Follow Us:
Download App:
  • android
  • ios