Asianet Suvarna News Asianet Suvarna News

ಜೂನ್‌ನಲ್ಲೂ ಸಿಗೋದಿಲ್ವಾ 10 ಕೆಜಿ ಅನ್ನಭಾಗ್ಯ ಅಕ್ಕಿ?

ಜೂನ್‌ ತಿಂಗಳಲ್ಲಿ ಫಲಾನುಭವಿಗಲಿಗೆ ಸಿಗಲ್ಲ ಹೆಚ್ಚುವರಿ ಅಕ್ಕಿ. ಈವರೆಗೂ ಹೆಚ್ಚುವರಿ ಅಕ್ಕಿ ಖರೀದಿಗೆ ಸರ್ಕಾರ ಆದೇಶ ಮಾಡಿಲ್ಲ.

ಜೂನ್‌ ತಿಂಗಳಲ್ಲಿ ಫಲಾನುಭವಿಗಲಿಗೆ ಸಿಗಲ್ಲ ಹೆಚ್ಚುವರಿ ಅಕ್ಕಿ. ಈವರೆಗೂ ಹೆಚ್ಚುವರಿ ಅಕ್ಕಿ ಖರೀದಿಗೆ ಸರ್ಕಾರ ಆದೇಶ ಮಾಡಿಲ್ಲವಾಗಿದ್ದು ಈ ಬಗ್ಗೆ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ 10 ಕೆಜಿ ಅಕ್ಕಿ ಯಾವ ರೀತಿಯಲ್ಲಿ ಕೊಡಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇನೆ. ಹೆಚ್ಚುವರಿ ಆರ್ಥಿಕ ಹೊಡೆತ ಇಲಾಖೆಗೆ ಬರುತ್ತೆ ಎಂದು ಹೇಳಿದ್ದಾರೆ. ಮಾಧ್ಯಮದ ಜತೆ ಮಾತನಾಡಿದ ಅವರು ಅನ್ನಭಾಗ್ಯ ಜಾರಿ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿವಂತೆ 10 ಕೆಜಿ ಅಕ್ಕಿಯನ್ನು ಯಾವ ರೀತಿ ಕೊಡಬಹುದು ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ. ಹಿಂದೆ ಇದ್ದ ಸರ್ಕಾರ  5 ಕೆಜಿ ಅಕ್ಕಿ ಕೊಡುತ್ತಿದ್ದರು, ಈಗ ನಾವು 10 ಕೆಜಿ ಕೊಡಬೇಕು ಎಂದರೆ ಡಬಲ್​ ಆಗುತ್ತೆ.ಕೊಟ್ಟ ಮಾತಿನಂತೆ ಅಕ್ಕಿ ಕೊಡುತ್ತೇವೆ. 10 ಕೆಜಿ ಅಕ್ಕಿ ಕೊಡುವುದು ಖಚಿತ, ಆದರೆ ಯಾವ ದಿನಾಂಕದಿಂದ ಕೊಡುತ್ತೇವೆ ಅಂತ ಸಿಎಂ ಅವರು ನಿಗದಿ ಮಾಡುತ್ತಾರೆ ಎಂದು ಹೇಳಿದರು .