ಡಿಕೆಶಿ Vs ಎಂ.ಬಿ ಪಾಟೀಲ್ ಜಿದ್ದಾಜಿದ್ದಿ ಶುರುವಾಗಿದ್ದು ಎಲ್ಲಿ ಗೊತ್ತಾ ?: ಮದಗಜ ಘರ್ಷಣೆ ಹಿಂದಿರೋ ಅಸಲಿ ಗುಟ್ಟೇನು ?
ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ನೀಡಿದ್ದೇ ತಡ, ಡಿಸಿಎಂ ಡಿಕೆ ಶಿವಕುಮಾರ್ ಬಣದವರು ಕೊತ ಕೊತ ಕುದಿಯುತ್ತಿದ್ದಾರೆ. ಯಾರು ಎಷ್ಟು ವರ್ಷ ಸಿಎಂ ಆಗಿರ್ತಾರೆ ಅಂತ ಹೇಳೋದಕ್ಕೆ ಅವರು ಯಾರು ಅಂತ ಡಿಕೆಶಿ ಬಂಟರು ಅಬ್ಬರಿಸ್ತಾ ಇದ್ದಾರೆ.
ಒಬ್ಬ ಕನಕಪುರ ಬಂಡೆ, ಇನ್ನೊಬ್ಬ ಬಬಲೇಶ್ವರ ಬಾಹುಬಲಿ. ಇಬ್ಬರೂ ಕಾಂಗ್ರೆಸ್ ಪಡೆಯ ಮುಂಚೂಣಿಯ ನಾಯಕರು. ಒಬ್ಬ ಉತ್ತರಾಪಥೇಶ್ವರ, ಇನ್ನೊಬ್ಬ ದಕ್ಷಿಣಾ ಪಥೇಶ್ವರ. ಇಬ್ಬರೂ ಕೈ ಕೋಟೆಯ ಕಟ್ಟಾಳುಗಳು. ಎರಡು ಶಕ್ತಿಗಳು ಒಂದೇ ಕಡೆ ಸೇರಿದ್ರೆ ಏನಾಗತ್ತೆ ಹೇಳಿ. ಒಂದೋ ಆನೆಬಲ, ಇಲ್ಲಾಂದ್ರೆ ಘರ್ಷಣೆ. ರಾಜ್ಯ ಕಾಂಗ್ರೆಸ್"ನಲ್ಲಿ ಈಗ ಆಗ್ತಿರೋದು ಅದೇ. ಇದು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಪವರ್"ಫುಲ್ ಮಿನಿಸ್ಟರ್ ಎಂ.ಬಿ ಪಾಟೀಲ್ ನಡುವಿನ ಜಿದ್ದಿನ ಕಥೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಎಂ.ಬಿ ಪಾಟೀಲ್ ಮಧ್ಯೆ ಶೀತಲ ಸಮರವೊಂದು ಶುರುವಾಗಿದೆ. ಇದು ಹಳೇ ದ್ವೇಷದ ಕುಲುಮೆಯಿಂದ ಭುಗಿಲೆದ್ದು ನಿಂತಿರೋ ಹೊಸ ಕಿಡಿ ಕಿಚ್ಚು. ಆ ಕಿಚ್ಚು ಹತ್ತಿಸಿದ್ದು ಸಿಎಂ ಸಿದ್ದರಾಮಯ್ಯ ಸೈನ್ಯದ ಮುಂಚೂಣಿಯ ದಂಡನಾಯಕ ಎಂ.ಬಿ ಪಾಟೀಲ್.
ಇದನ್ನೂ ವೀಕ್ಷಿಸಿ: ನೂತನ ಸಂಸತ್‌ನಲ್ಲಿ ವಿಜೃಂಭಿಸಲಿದೆ ಚಿನ್ನದ ರಾಜದಂಡ: ಮದ್ರಾಸ್-ಡೆಲ್ಲಿ ತಲುಪಿದ ಸೆಂಗೋಲ್ ಪ್ರಯಾಣ ಹೇಗಿತ್ತು..?