Asianet Suvarna News Asianet Suvarna News

ಬಿಎಸ್‌ವೈ ಪರ- ವಿರೋಧ ಯಾರು.? ಇದು ಬಿಜೆಪಿ ಸಹಿಯುದ್ಧದ ರೋಚಕ ರಹಸ್ಯ..!

Jun 8, 2021, 3:08 PM IST

ಬೆಂಗಳೂರು (ಜೂ. 08): ಪಕ್ಷದ ಹೈಕಮಾಂಡ್‌ ಬಯಸಿದರೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ  ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಯಲ್ಲಿ ಪರ-ವಿರೋಧದ ಸಹಿ ಸಂಗ್ರಹದ ಭರಾಟೆ ಆರಂಭವಾಗಿದೆ.

ವಿರೋಧಿಗಳಿಗೆ ಟಕ್ಕರ್, ಹೈಕಮಾಂಡ್‌ಗೆ ಸಂದೇಶ, ಬಿಎಸ್‌ವೈ ರಾಜೀನಾಮೆ ಹೇಳಿಕೆ ಹಿಂದಿನ ಲೆಕ್ಕಾಚಾರವಿದು

ಈ ಬೆಳವಣಿಗೆಗೆ ಬ್ರೇಕ್‌ ಹಾಕುವ ಪ್ರಯತ್ನ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಯಾರೂ ಕೂಡ ಸಹಿ ಸಂಗ್ರಹಿಸುವುದಾಗಲಿ ಅಥವಾ ರಾಜಕೀಯ ಹೇಳಿಕೆಗಳನ್ನು ನೀಡುವುದಾಗಲಿ ಮಾಡದೆ ಕೋವಿಡ್‌ ಕೆಲಸದಲ್ಲಿ ತೊಡಗಿಸಿಕೊಳ್ಳಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಜತೆಗೆ ಅನೇಕ ಸಚಿವರು ಹಾಗೂ ಶಾಸಕರೂ ಸಹಿ ಸಂಗ್ರಹ ಒಳ್ಳೆಯದಲ್ಲ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ಏನಿದು ಸಹಿಯುದ್ಧ..? ಏನಿದರ ಅಸಲಿಯತ್ತು..?