ವಿರೋಧಿಗಳಿಗೆ ಟಕ್ಕರ್, ಹೈಕಮಾಂಡ್‌ಗೆ ಸಂದೇಶ, ಬಿಎಸ್‌ವೈ ರಾಜೀನಾಮೆ ಹೇಳಿಕೆ ಹಿಂದಿನ ಲೆಕ್ಕಾಚಾರವಿದು

- ಹೈಕಮಾಂಡ್‌ ಹೇಳಿದರೆ ರಾಜೀನಾಮೆ: ಸಿಎಂ

- ವರಿಷ್ಠರು ಬಯಸುವವರೆಗೂ ಮುಖ್ಯಮಂತ್ರಿಯಾಗಿರುವೆ, ಬೇಡವೆಂದರೆ ರಾಜೀನಾಮೆಗೆ ಸಿದ್ಧ

- ಪರ್ಯಾಯ ವ್ಯಕ್ತಿಗಳು ಇದ್ದೇ ಇರುತ್ತಾರ, ಭಾರಿ ಸಂಚಲನ ಮೂಡಿಸಿದ ಯಡಿಯೂರಪ್ಪ ಹೇಳಿಕೆ

First Published Jun 7, 2021, 11:16 AM IST | Last Updated Jun 7, 2021, 11:16 AM IST

ಬೆಂಗಳೂರು (ಜೂ. 07): ದೆಹಲಿ ಹೈಕಮಾಂಡ್‌ ಬಯಸುವವರೆಗೂ ನಾನು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ಬೇಡ ಎಂದರೆ ರಾಜೀನಾಮೆ ನೀಡುವುದಕ್ಕೂ ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿರುವ ಹೇಳಿಕೆ ಸಂಚಲನಕ್ಕೆ ಕಾರಣವಾಗಿದೆ. ಇಂಥದೊಂದು ಹೇಳಿಕೆ ನೀಡುವ ಮೂಲಕ ಪಕ್ಷದಲ್ಲಿನ ತಮ್ಮ ವಿರೋಧಿಗಳಿಗೆ ತಣ್ಣನೆಯ ಎದಿರೇಟು ಕೊಟ್ಟಿದ್ದು, ಎಲ್ಲವನ್ನೂ ಹೈಕಮಾಂಡ್‌ ನಿರ್ಧರಿಸಲಿದೆ ಎಂಬ ಸಂದೇಶ ರವಾನಿಸಿದ್ದಾರೆ.

ರಾಜೀನಾಮೆ ಪಾಲಿಟಿಕ್ಸ್‌ಗೆ ಟ್ವಿಸ್ಟ್ ಕೊಟ್ಟ ಸಿಎಂ, ವಿರೋಧಿಗಳು ಗಪ್‌ಚುಪ್..!

ಕೋವಿಡ್ ಸಮಯದಲ್ಲಿ ನಾಯಕತ್ವ ಕುರಿತು ಚರ್ಚೆ ನಡೆಯುವುದು ಸರ್ಕಾರ ಹಾಗೂ ಪಕ್ಷದ ವರ್ಚಸ್ಸಿನ ದೃಷ್ಟಿಯಿಂದ ಒಳ್ಳೆಯದಲ್ಲ. ಇದಕ್ಕೆ ಪಕ್ಷದ ವರಿಷ್ಠರೇ ಬ್ರೇಕ್ ಹಾಕಬೇಕು ಎಂಬ ಅಭಿಪ್ರಾಯ ಪಕ್ಷದೊಳಗಿದೆ. ಹಾಗಾದರೆ ಸಿಎಂ ಹೇಳಿಕೆ ಹಿಂದಿನ ಉದ್ದೇಶವೇನು..?