ಮೊದಲ ಅಧಿವೇಶನದಲ್ಲೇ ಅಮಾನತು ಅಸ್ತ್ರ: ಸಂಧಾನ ಸಭೆ ಮಾಡ್ತಾರಾ ಸ್ಪೀಕರ್‌..?

ಬಜೆಟ್‌ ಅಧಿವೇಶನ ಇಂದು ಮತ್ತು ನಾಳೆ ಮಾತ್ರ ನಡೆಯಲಿದೆ. ಹಾಗಾಗಿ ಸಿಎಂ ಕಲಾಪದಲ್ಲಿ ಬಜೆಟ್‌ ಮೇಲೆ ಇಂದು ಉತ್ತರಿಸಬೇಕಾಗಿದೆ.
 

Share this Video

ಬೆಂಗಳೂರು: ರಾಜ್ಯ ಸರ್ಕಾರದ ಮೊದಲ ಅಧಿವೇಶನವೇ ರಣರಂಗವಾಗಿದೆ. ಬುಧವಾರ ನಡೆದ ಬಜೆಟ್‌ ಅಧಿವೇಶನದಲ್ಲಿ(Budget Session) ಗದ್ದಲ ಕೋಲಾಹಲ ನಡೆದಿದೆ. ಇಂದು ಮತ್ತು ನಾಳೆ ಬಜೆಟ್‌ ಅಧಿವೇಶನ ನಡೆಯಲಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ(CM Siddaramaiah) ಅವರು ಕಲಾಪದಲ್ಲಿ(Session) ಬಜೆಟ್‌ ಮೇಲೆ ಉತ್ತರಿಸಬೇಕಾಗಿದೆ. ಇನ್ನೂ ಸುಗಮ ಕಲಾಪಕ್ಕಾಗಿ ಸ್ಪೀಕರ್‌ ಯು.ಟಿ. ಖಾದರ್‌ ಸಂಧಾನ ಸಭೆ ಮಾಡುವ ಸಾಧ್ಯತೆ ಸಹ ಇದೆ. ಇಂದು ಬಿಜೆಪಿ(BJP) ಶಾಸಕರು ಕಲಾಪವನ್ನು ಬಹಿಷ್ಕಾರ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೇ ಬಿಜೆಪಿಗೆ ಜೆಡಿಎಸ್‌(JDS) ಬೆಂಬಲ ನೀಡಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಲು ಹೆಚ್‌ಡಿಕೆ ಶಾಸಕರ ಸಭೆಯನ್ನು ಇಂದು ಕರೆದಿದ್ದಾರೆ.

ಇದನ್ನೂ ವೀಕ್ಷಿಸಿ:  ಬಿಜೆಪಿ ಶಾಸಕರು ಸದನಕ್ಕೆ ಗೈರಾಗುವ ಸಾಧ್ಯತೆ: ಶಾಸಕರ ಸಭೆ ಕರೆದ ಹೆಚ್‌ಡಿಕೆ

Related Video