
ಕುಮಾರಸ್ವಾಮಿ ಜೊತೆ ಕುಸ್ತಿ..ರೇವಣ್ಣ ಜೊತೆ ದೋಸ್ತಿ: ದೇವೇಗೌಡರ ದೊಡ್ಡ ಮಗ ಅಂದ್ರೆ ಸಿದ್ದರಾಮಯ್ಯಗೆ ಬಲು ಪ್ರೀತಿ..!
"ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡೋರಲ್ಲ" ಅಂದ್ರು ರೇವಣ್ಣ
ಸಿದ್ದುಗೆ ಸಿಎಂ ಪಟ್ಟ ಸಿಗದಿದ್ದಾಗ ಕಣ್ಣೀರು ಹಾಕಿದ್ದರು ಗೌಡರ ಮಗ..!
ದಾಳಗಳು ಉರುಳಿ ಬಿದ್ದರೂ ಸಿದ್ರಾಮಣ್ಣ-ರೇವಣ್ಣ ಸ್ನೇಹ ಭದ್ರ..!
ಇದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಹಿರಿಮಗ ಎಚ್.ಡಿ ರೇವಣ್ಣ(HD Revanna) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ನಡುವಿನ ಸ್ನೇಹದ ರೋಚಕ ಕಥೆ. ಅಪ್ಪನ ರಾಜಕೀಯ ವೈರಿಯ ಜೊತೆ ಮಗನ ಫ್ರೆಂಡ್'ಶಿಪ್. ಸಹೋದರನ ಪೊಲಿಟಿಕಲ್ ದುಷ್ಮನ್ ಜೊತೆ ಅಣ್ಣನ ಸ್ವೇಹ. ರಾಜಕೀಯ ವೈರುಧ್ಯ, ಜಿದ್ದಾಜಿದ್ದಿಯ ಮಧ್ಯೆಯೂ ಸಿದ್ದರಾಮಯ್ಯ ಮತ್ತು ರೇವಣ್ಣ ರಾಜ್ಯ ರಾಜಕಾರಣದ ಕುಚಿಕೂ ದೋಸ್ತ್'ಗಳು ಆಗಿದ್ದಾರೆ. ರಾಜಕೀಯ ಒಂಥರಾ ಪಗಡೆಯಾಟದ ಹಾಗೆ.. ಅಲ್ಲಿ ಉರುಳೋ ದಾಳಗಳಿಗೆ ಶತ್ರುಗಳು ಮಿತ್ರರಾಗ್ತಾರೆ, ಮಿತ್ರರು ಶತ್ರುಗಳ್ತಾರೆ. ಅಲ್ಲಿ ಶತ್ರುತ್ವಕ್ಕೂ ಗ್ಯಾರಂಟಿ ಇಲ್ಲ, ಮಿತ್ರತ್ವಕ್ಕೂ ಗ್ಯಾರಂಟಿ ಇಲ್ಲ. ದಾಳ ಯಾವಾಗ ಬೇಕಾದ್ರೂ ತಿರುಗಿ ಬೀಳ್ಬಹ್ದು. ಆದ್ರೆ ಸಿದ್ದರಾಮಯ್ಯ ಮತ್ತು ಎಚ್.ಡಿ ರೇವಣ್ಣನವರ ಸ್ನೇಹದ(Friendship) ಮುಂದೆ ಯಾವ ಪಗಡೆಯಾಟವೂ ನಡೆಯಲ್ಲ, ಯಾವ ದಾಳವೂ ಕೆಲಸ ಮಾಡಲ್ಲ. ದೇವೇಗೌಡ್ರು(Devegowda) ಮತ್ತು ಸಿದ್ದರಾಮಯ್ಯನವರ ಮಧ್ಯೆ ಸುದೀರ್ಘ ರಾಜಕೀಯ ದ್ವೇಷವಿದೆ, ಅದೇ ರೀತಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ವರ್ತಮಾನದ ರಾಜಕಾರಣದಲ್ಲಿ ರಣರಣ ವೈರಿಗಳು. ಆದ್ರೆ ಗೌಡರ ಹಿರಿಮಗ ರೇವಣ್ಣ, ಕುಮಾರಸ್ವಾಮಿಯವರ ದೊಡ್ಡಣ್ಣ ರೇವಣ್ಣ ಮಾತ್ರ ಸಿದ್ದರಾಮಯ್ಯನವರ ಆಪ್ತಮಿತ್ರ, ಅತ್ಯಾಪ್ತ ಮಿತ್ರ.
ಇದನ್ನೂ ವೀಕ್ಷಿಸಿ: ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಕುಮಾರಸ್ವಾಮಿ ಎಕ್ಸ್‌ಕ್ಲೂಸಿವ್ ಮಾಹಿತಿ, ಎನ್‌ಡಿಎ ಸಭೆ ಬಳಿಕ ಅಂತಿಮ ಶರಾ?