ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ಕುಮಾರಸ್ವಾಮಿ ಎಕ್ಸ್‌ಕ್ಲೂಸಿವ್ ಮಾಹಿತಿ, ಎನ್‌ಡಿಎ ಸಭೆ ಬಳಿಕ ಅಂತಿಮ ಶರಾ?

 ಇದುವರೆಗೂ ಕೇವಲ ಊಹಾಪೋಹದ ಹಂತದಲ್ಲಿ ಇದ್ದ ಬಿಜೆಪಿ ಜೆಡಿಎಸ್ ಮೈತ್ರಿ ಈಗ ಪಕ್ಕಾ ಆಗುವ ಲಕ್ಷಣಗಳು ಘೋಚರಿಸುತ್ತಿದೆ. ಸುವರ್ಣ ನ್ಯೂಸ್ ಗೆ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ  ಈ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ನೀಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜು.15): ಇದುವರೆಗೂ ಕೇವಲ ಊಹಾಪೋಹದ ಹಂತದಲ್ಲಿ ಇದ್ದ ಬಿಜೆಪಿ ಜೆಡಿಎಸ್ ಮೈತ್ರಿ ಈಗ ಪಕ್ಕಾ ಆಗುವ ಲಕ್ಷಣಗಳು ಘೋಚರಿಸುತ್ತಿದೆ. ಸುವರ್ಣ ನ್ಯೂಸ್ ಗೆ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಈ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ನೀಡಿದ್ದು, ಎನ್ ಡಿಎ ಸಭೆ ಬಳಿಕ ಮೈತ್ರಿ ಅಧಿಕೃತವಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ. ಎನ್‌ಡಿಎ ಮಿತ್ರ ಪಕ್ಷಗಳ ಸಭೆಗೂ ಮುನ್ನ ಮತ್ತೆ ಕೇಂದ್ರ ಬಿಜೆಪಿ ನಾಯಕರ ಭೇಟಿ ಮಾಡಿ ಕುಮಾರಸ್ವಾಮಿ ಮಾತುಕತೆ ನಡೆಸಲಿದ್ದು, ಇಂದು ಸಂಜೆ ಕುಮಾರಸ್ವಾಮಿ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಮೈತ್ರಿ ಗೆ ಅಂತಿಮ ಮುದ್ರೆ ಬೀಳಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಸುವರ್ಣನ್ಯೂಸ್ ಗೆ ಹೇಳಿಕೆ ನೀಡಿರುವ ಕುಮಾರಸ್ವಾಮಿ, ಒಂದು ವರ್ಗದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಆಗಬೇಕು ಅನ್ನೋ ಭಾವನೆ ಇದೆ. ಆದರೆ ಅದು ಇನ್ನೂ ಭಾವನೆ ಹಂತದಲ್ಲಿ ಇದೆ. ಯಾವುದೇ ರೀತಿಯ ಚಾಲನೆ ಇನ್ನೂ ಸಿಕ್ಕಿಲ್ಲ ಜನಗಳ ಭಾವನೆ ಬಗ್ಗೆ ನಾವು ಯಾವ ರೀತಿ ಸ್ಪಂದಿಸಬೇಕು ಅಂತ ಪಕ್ಷದಲ್ಲಿ ಕುಳಿತು ತೀರ್ಮಾನ ಮಾಡ್ತೀವಿ. ಕೇಂದ್ರ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ ಅನ್ನೋದು ಊಹಾಪೋಹಗಳು ಅಷ್ಟೇ. ನಾವಿನ್ನೂ ಯಾರನ್ನು ಭೇಟಿ ಮಾಡಿಲ್ಲ. ಭೇಟಿ ಮಾಡುವ ಸಂದರ್ಭ ಬಂದಾಗ ಜನತೆಗೆ ತಿಳಿಸಿಯೇ ಭೇಟಿ ಮಾಡ್ತೀನಿ ಎಂದು ಹೇಳಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಜುಲೈ 18ರಂದು ನಡೆಯಲಿರುವ ಎನ್ ಡಿಎ ಸಭೆ ಬಗ್ಗೆ ಕುತೂಹಲ ಮೂಡಿದೆ.

Related Video