Lok Sabha Elections 2024: ತವರು ಕ್ಷೇತ್ರ ಗೆಲ್ಲೋಕೆ ಸಿಎಂ.. ಡಿಸಿಎಂ ಪ್ರತಿಜ್ಞೆ.. ನೂರಾರು ಚಾಲೆಂಜ್..!

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳು ಬಹಳ ಪ್ರತಿಷ್ಠೆಯ ಕಣವಾಗಿದೆ. 

First Published Apr 19, 2024, 2:11 PM IST | Last Updated Apr 19, 2024, 2:11 PM IST

ಬೆಂಗಳೂರು(ಏ.19): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳು ಬಹಳ ಪ್ರತಿಷ್ಠೆಯ ಕಣವಾಗಿದೆ. ಹೌದು, ಇವೆರಡೂ ಕ್ಷೇತ್ರಗಳಲ್ಲಿ ಗೆಲುವೊಂದೇ ಮಂತ್ರವಾಗಿದ್ದು, ನೂರೆಂಟು ತಂತ್ರಗಳನ್ನ ಹೆಣೆಯಲಾಗಿದೆ. ಹೀಗಾಗಿ ಉಭಯ ನಾಯಕರುಗಳಿಗೆ ತವರಿನಲ್ಲೇ ತಳಮಳ ಶುರುವಾಗಿದೆ. ತವರು ಕ್ಷೇತ್ರದಲ್ಲಿ ಡಿಕೆಶಿ ಭರ್ಜರಿ ಮತಬೇಟೆಯಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ಡಿಕೆಶಿಗೆ ಪ್ರತಿಷ್ಠೆಯ ಕಣವಾಗಿದೆ. ಇನ್ನು ತವರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನ ಗೆಲ್ಲಿಸಲು ಸಿಎಂ ಸಿದ್ದರಾಮಯ್ಯ ನಾನಾ ತಂತ್ರ ಹೆಣೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರ ಗೆಲ್ಲಿಸಬೇಕಾದ ಒತ್ತಡದಲ್ಲಿದ್ದಾರೆ. 

HD Deve Gowda: 'ಕನಕ'ವ್ಯೂಹದಲ್ಲಿ ಬಂಧಿಯಾಗಿದ್ದು ಹೇಗೆ ದೇವೇಗೌಡರು..?