HD Deve Gowda: 'ಕನಕ'ವ್ಯೂಹದಲ್ಲಿ ಬಂಧಿಯಾಗಿದ್ದು ಹೇಗೆ ದೇವೇಗೌಡರು..?

ಈ ಬಾರಿಯ ಮರೆಯಲಾಗದ ಮತಯುದ್ಧದ ಸಂಚಿಕೆಯಲ್ಲಿ ದೇವೇಗೌಡರ ಮಹಾ ಸೋಲಿನ ಎಪಿಸೋಡ್‌. ಮೂರೇ ವರ್ಷದ ಹಿಂದೆ ದೇಶದ ಪ್ರಧಾನಿ ಆಗಿದ್ದವರಿಗೆ ಅಂದು ಸಂಸದರಾಗೋಕು ಸಾಧ್ಯವಾಗಿರಲಿಲ್ಲ. 
 

Santosh Naik  | Updated: Apr 19, 2024, 1:25 PM IST

ಬೆಂಗಳೂರು (ಏ.19): ಮಣ್ಣಿನ ಮಗ ದೇವೇಗೌಡರು ಪ್ರಧಾನಿ ಪಟ್ಟದಿಂದ ಇಳಿದು ಮೂರು ವರ್ಷವಾಗಿತ್ತಷ್ಟೇ. ದೇಶದ ಪ್ರಧಾನಿ ಆಗಿದ್ದವರಿಗೆ ಮೂರೇ ವರ್ಷದಲ್ಲಿ ಕನಿಷ್ಠ ಸಂಸದರಾಗೋಕು ಸಾಧ್ಯವಾಗಿರಲಿಲ್ಲ. ದೊಡ್ಡ ಯುದ್ಧವನ್ನೇ ಮಾಡಿದ್ದರೂ ದೇವೇಗೌಡರು ಅಂದು ಸೋಲು ಕಂಡಿದ್ದರು. ಅಂದು ಸೋತಿದ್ದು ದೇವೇಗೌಡರು ಮಾತ್ರವೇ ಅಲ್ಲ.  ಅವರ ಇಡೀ ಸೇನಾಪಡೆ ಸೋಲು ಕಂಡಿತ್ತು. ಎಂಥವರನ್ನಾದರೂ ಗೆಲ್ಲಿಸಿಕೊಂಡು ಬರುವಷ್ಟು ಶಕ್ತಿ ಇದ್ದ ದೇವೇಗೌಡರಿಗೆ, ಅಂದು ತಮ್ಮ ಸ್ವಂತ ಮಕ್ಕಳನ್ನೂ ಗೆಲ್ಲಿಸಿಕೊಳ್ಳೋಕೆ ಸಾಧ್ಯವಾಗಿರಲಿಲ್ಲ. ದೇವೇಗೌಡರಿಗೆ ಒಂದು ರಾಜಕೀಯ ಪುನರ್ಜನ್ಮ ಬೇಕಿತ್ತು. ಆ ಪುನರ್ಜನ್ಮದ ಬೆನ್ನಲ್ಲೇ ಎದ್ದು ನಿಂತದ್ದು, ಮರೆಯಲಾಗದ ಮತಯುದ್ಧದ ರೋಚಕ ಕಥೆ.
 

Read More...