Asianet Suvarna News Asianet Suvarna News

ಮತ್ತೆ ದೆಹಲಿಗೆ ತೆರಳಿದ ಸಚಿವ ಮುನಿಯಪ್ಪ: ಕೇಂದ್ರದಿಂದ ಅಕ್ಕಿ ತರಲು ಕೊನೆ ಕ್ಷಣದವರೆಗೆ ತಂತ್ರ !

ಕೇಂದ್ರ ಆಹಾರ ಸಚಿವ ಗೋಯಲ್ ಸಚಿವ ಕೆ.ಹೆಚ್‌.ಮುನಿಯಪ್ಪ ಭೇಟಿಗೆ ಅವಕಾಶ ಕೊಟ್ಟಿದ್ದಾರೆ.
 

First Published Jun 23, 2023, 11:45 AM IST | Last Updated Jun 23, 2023, 11:45 AM IST

ಕೇಂದ್ರ ಸಚಿವ ಪಿಯೂಷ್​ ಗೋಯಲ್ ರಾಜ್ಯ ಆಹಾರ ಸಚಿವ ಕೆ.ಹೆಚ್‌. ಮುನಿಯಪ್ಪ ಭೇಟಿಗೆ​ ಅವಕಾಶ ಕೊಟ್ಟಿದ್ದಾರೆ. ಸಚಿವ ಮುನಿಯಪ್ಪ ಬೆಳಗ್ಗೆ 7.30ರ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಪಿಯೂಷ್‌ ಗೋಯಲ್‌ ಭೇಟಿ ವೇಳೆ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಪೂರೈಸುವಂತೆ ಮನವಿ ಮಾಡಲಿದ್ದಾರೆ. ಸದ್ಯ ರಾಜ್ಯ ಸರ್ಕಾರ ಅನ್ನಭಾಗ್ಯಕ್ಕೆ ಅಕ್ಕಿ ಪೂರೈಸಲು ಹರಸಾಹಸ ಪಡುತ್ತಿದೆ. ಹಾಗಾಗಿ ಕೇಂದ್ರ ಸಚಿವರ ಈ ಭೇಟಿ ತುಂಬಾ ಮುಖ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ 10 ಕೆ.ಜಿ ಅಕ್ಕಿ ಕೊಡುವುದಾಗಿ ಘೋಷಿಸಿತ್ತು. ಒಂದು ವೇಳೆ ಎಫ್‌ಸಿಐನಿಂದ ಅಕ್ಕಿ ಸಿಕ್ಕರೇ, ರಾಜ್ಯ ಸರ್ಕಾರದ ಹೊರೆ ಕಡಿಮೆಯಾಗಲಿದೆ.   

ಇದನ್ನೂ ವೀಕ್ಷಿಸಿ: ಪಾಟ್ನಾದಲ್ಲಿಂದು ಮಹಾಘಟಬಂಧನ್‌ ಮೀಟಿಂಗ್‌: ಮೋದಿ ಕಟ್ಟಿಹಾಕಲು ವಿಪಕ್ಷ ನಾಯಕರ ರಣತಂತ್ರ!

Video Top Stories