ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಗ್ಯಾಂಗ್‌ಗೆ ಹಲ್ಲೆ ಮಾಡಲು ಪೊಲೀಸ್ ಲಾಠಿ ಸಿಕ್ಕಿದ್ದು ಹೇಗೆ..?

ರಕ್ತದ ಕಲೆ ಇರುವ ಲಾಠಿಯ ಪೀಸ್‌ಗಳನ್ನ ವಶಕ್ಕೆ ಪಡೆದ ಪೊಲೀಸರು
ಲಾಠಿಯ ಮೇಲಿನ ಬೆರಳಚ್ಚು ಸಂಗ್ರಹಕ್ಕೆ ಮುಂದಾಗಿರುವ ಪೊಲೀಸರು
ಎಫ್ಎಸ್ಎಲ್ ವರದಿ ನಂತ್ರ ಲಾಠಿಯಿಂದ ಹೊಡೆದವರ ರಹಸ್ಯ ಬಯಲು

Share this Video
  • FB
  • Linkdin
  • Whatsapp

ದರ್ಶನ್ (Darshan) ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ(Renukaswamy murder case) ಸಂಬಂಧಿಸಿದಂತೆ ಆತನ ಮೇಲೆ ಹಲ್ಲೆ ಮಾಡಿದ್ದು ಪೊಲೀಸ್‌ ಲಾಠಿಯಿಂದ (Police Lathi) ಎಂದು ತಿಳಿದುಬಂದಿದೆ. ಆ ಲಾಠಿಯನ್ನೇ ತನಿಖೆ ನಡೆಸಿ ಪೊಲೀಸರು(Police) ವಶಕ್ಕೆ ಪಡೆದಿದ್ದಾರೆ. ಲಾಠಿ ಸಿಕ್ಕಿದ್ದು ಹೇಗೆ ಅನ್ನೋದೇ ಇಂಟರೆಸ್ಟಿಂಗ್ ಸ್ಟೋರಿಯಾಗಿದೆ. ದರ್ಶನ್ ಬರ್ತ ಡೇ ದಿನ ಬಂದೋಬಸ್ತ್‌ಗೆ ಬಂದಿದ್ದ ಪೊಲೀಸರು, ಮನೆಯ ಬಳಿ ಒಂದು ಲಾಠಿ ಬಿಟ್ಟು ಹೋಗಿದ್ದರಂತೆ. ಮನೆಯ ಸೆಕ್ಯೂರಿಟಿ ಗಾರ್ಡ್ ರೂಂನಲ್ಲಿ ಲಾಠಿಯನ್ನು ಮನೆಯವರು ಎತ್ತಿಟ್ಟಿದ್ದರಂತೆ. ಮನೆಯಲ್ಲಿದ್ದ ಲಾಠಿಯನ್ನ ವ್ಯಕ್ತಿಯೊಬ್ಬನಿಂದ ಶೆಡ್‌ಗೆ ನಟ ದರ್ಶನ್‌ ತರಿಸಿಕೊಂಡಿದ್ದರಂತೆ. ಲಾಠಿ ತಂದು ಕೊಡುವ ಸಂಪೂರ್ಣ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಅದೇ ಲಾಠಿ ಬಳಕೆ ಮಾಡಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲಾಗಿದ್ದು, ಹಲ್ಲೆ ವೇಳೆ ಪೀಸ್ ಪೀಸ್ ಆಗಿದ್ದ ಲಾಠಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ವೀಕ್ಷಿಸಿ: ಮತ್ತೊಂದು ರೂಲ್ಸ್‌ ಬ್ರೇಕ್‌ ಮಾಡಿದ ದರ್ಶನ್‌ ಗ್ಯಾಂಗ್‌: ನಟನ ಬಳಿ ಇವೆಯಂತೆ 2 ಯುಎಸ್ ಮೇಡ್ ಪಿಸ್ತೂಲ್‌ಗಳು ?

Related Video