ಮಹಾರಾಷ್ಟ್ರದಲ್ಲಿ ಕಿಚ್ಚು ಹೊತ್ತಿಸಿದ 'ಜೌರಂಗಜೇಬ್‌' ಸ್ಟೇಟಸ್‌: ಬಲಪಂಥೀಯ ಬಂದ್‌ ಖಂಡಿಸಿ ವಿರೋಧಿಗಳಿಂದ ಪ್ರತಿಭಟನೆ

ಮಹಾರಾಷ್ಟ್ರದಲ್ಲಿ ಜೌರಂಗಜೇಬ್‌, ಟಿಪ್ಪು ಹೊಗಳಿ, ಶಿವಾಜಿಗೆ ಅವಮಾನ ಮಾಡಿ ಸ್ಟೇಟಸ್ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಖಂಡಿಸಿ ಬಲಪಂಥೀಯ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದು, ಇದನ್ನು ಖಂಡಿಸಿ ವಿರೋಧಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. 
 

Share this Video
  • FB
  • Linkdin
  • Whatsapp

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಕುರಿತು ಸ್ಟೇಟಸ್‌ ಹಾಕಿ, ಶಿವಾಜಿಗೆ ಅಪಮಾನ ಮಾಡಿದ ಪೋಸ್ಟ್‌ನನ್ನು ಖಂಡಿಸಿ ಕೆಲವು ಹಿಂದೂ ಸಂಘಟನೆಗಳು ಬುಧವಾರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೃಹತ್ ಪ್ರತಿಭಟನೆ ಮತ್ತು ಬಂದ್‌ ನಡೆಸಿದ್ದವು. ಇದೀಗ ಬಲಪಂಥೀಯರ ಈ ಬಂದ್‌ನನ್ನು ಖಂಡಿಸಿ ವಿರೋಧಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬುಧವಾರ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸಂಘಟನೆಗಳು ಕರೆ ನೀಡಿದ್ದವು. ಅಲ್ಲದೇ ವ್ಯಕ್ತಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಜೂ.19 ರವರೆಗೆ ಕೊಲ್ಲಾಪುರದಲ್ಲಿ 144 ಸೆಕ್ಷನ್‌ ಜಾರಿಯಲ್ಲಿ ಇರಲಿದೆ. ಮಹಾರಾಷ್ಟ್ರ ಸಿಎಂ ಶಿಂಧೆ ಶಾಂತಿ ಕಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ: ಬಿಜೆಪಿ ಮೊದಲ ಶಾಸಕಾಂಗ ಸಭೆ: ವಿಪಕ್ಷ ನಾಯಕನ ಆಯ್ಕೆ, ಸೋಲಿನ ಪರಾಮರ್ಶೆ ಬಗ್ಗೆ ಚರ್ಚೆ ಸಾಧ್ಯತೆ..?

Related Video