Asianet Suvarna News Asianet Suvarna News

ಸೆಕ್ಯೂರಿಟಿ ಗಾರ್ಡ್ ಆಗ್ತಿದ್ದೆ ಎಂದಿದ್ದ ಜಮೀರ್ BSY ಇದ್ದ ವೇದಿಕೆ ಏರದೆ ಕಾಲ್ಕಿತ್ತರು!

ಫ್ಲೆಕ್ಸ್ ನಲ್ಲಿ ಭಾವಚಿತ್ರ ಇರದ ಕಾರಣ ವೇದಿಕೆ ಹತ್ತದೆ ಹೊರನಡೆದ ಜಮೀರ್/ ವಿಕ್ಟೋರಿಯಾ ಆಸ್ಪತ್ರೆ ವಿವಿಧ ಅಭಿವೃದ್ಧಿ ಕಾರ್ಯಕ್ರಮ/ ಗುದ್ದಲಿ ಪೂಜೆಗೆ ಬಂದು ವೇದಿಕೆ ಏರದ ಚಾಮರಾಜಪೇಟೆ ಶಾಸಕ

First Published Dec 11, 2019, 5:54 PM IST | Last Updated Dec 11, 2019, 6:44 PM IST

ಬೆಂಗಳೂರು(ಡಿ. 11)  ವಿಕ್ಟೋರಿಯಾ ಆಸ್ಪತ್ರೆಯ ನೂತನ ಕಟ್ಟಡಗಳ ಶಂಕುಸ್ಥಾಪನೆ ಕಾರ್ಯಕ್ರಮದಿಂದ ಜಮೀರ್ ವಾಕ್ ಔಟ್ ಮಾಡಿದ್ದಾರೆ.

HDKಗೆ ಏನೋ ಒಂದು ಚಟ

ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಬಂದರೂ ನಂತರ ಬ್ಯಾನರ್ ಮತ್ತು ಫ್ಲೆಕ್ಸ್ ಗಳಲ್ಲಿ ತಮ್ಮ ಪೋಟೋ ಇರದ ಕಾರಣ ವೇದಿಕೆ ಏರದೆ ಕಾರ್ಯಕ್ರಮದಿಂದ ಹೊರನಡೆದರು. ಯಡಿಯೂರಪ್ಪ ಸಿಎಂ ಆದರೆ ಒಂದು ದಿನ ಅವರ ಮನೆ ಸೆಕ್ಯೂರಿಟಿ ಗಾರ್ಡ್ ಆಗುತ್ತೇನೆ ಎಂದು ಜಮೀರ್ ಹಿಂದೊಮ್ಮೆ ಹೇಳಿದ್ದು ಉಪಚುನಾವಣೆ ಫಲಿತಾಂಶದ ನಂತರ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.